ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

AAP Model ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್. ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ವಿವರಣೆ ಮತ್ತು ಚಿತ್ರಗಳು

ಕೊರೊನಾ ವೈರಸ್ ಸೋಂಕಿತ ರೋಗಿಗಳ ಚಿಕಿತ್ಸೆಗೆ ಸಹಾಯಕವಾಗಲು ದೆಹಲಿ ಸರ್ಕಾರ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಿದೆ. ದೇಶದಲ್ಲಿಯೇ ಮೊದಲು ಇಂತಹ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಕೋವಿಡ್ - 19 ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಲಾ ದಾನ ಮಾಡಬಹುದು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು. "ಜನರು ಬೇರೆಯವರ ಜೀವ ಉಳಿಸಲು ಪ್ಲಾಸ್ಮಾ ಬ್ಯಾಂಕ್‌ಗೆ ಪ್ಲಾಸ್ಮಾ ದಾನ ಮಾಡಬೇಕು. ದೆಹಲಿ ಜನರು ಬೇರೆಯವರ ಜೀವ ಉಳಿಸಲು ಇದು ಉತ್ತಮ ಅವಕಾಶ" ಎಂದು ಹೇಳಿದರು.  "ಯಾವುದೇ ವ್ಯಕ್ತಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖವಾಗಿದ್ದರೆ ಮತ್ತು 14 ದಿನದ ಐಸೋಲೇಷನ್ ಪೂರ್ಣಗೊಳಿಸಿದ್ದರೆ ಇನ್ನೊಬ್ಬರ ಜೀವ ಉಳಿಸಲು ಪ್ಮಾಸ್ಲಾ ದಾನ ಮಾಡಬಹುದು. ಜನರು 1031 ನಂಬರ್‌ಗೆ ಕರೆ ಮಾಡಿ ಪ್ಲಾಸ್ಮಾ ದಾನ ಮಾಡುವ ಬಗ್ಗೆ ಮಾಹಿತಿ ನೀಡಬಹುದು" ಎಂದರು. ಪ್ಮಾಸ್ಮಾ ದಾನ ಮಾಡಲು ಏನು ಮಾಡಬೇಕು? "ಜನರು ಪ್ಲಾಸ್ಮಾ ದಾನ ಮಾಡಲು ಬಯಸಿದರೆ 1031 ನಂಬರ್‌ಗೆ ಕರೆ ಮಾಡಬಹುದು ಅಥವ 8800007722 ನಂಬರ್‌ಗೆ ವಾಟ್ಸಪ್ ಸಂದೇಶ ಕಳಿಸಬಹುದು. ಬಳಿಕ ವೈದ್ಯರು ಅವರನ್ನು ಸಂಪರ್ಕಿಸುತ್ತಾರೆ" ಎಂದು ಅರವಿಂದ ಕೇಜ್ರಿವಾಲ್ ಹೇಳಿದರು. ಯಾರು ಪ್ಲಾಸ್ಮಾ ದಾನ ಮಾಡಬಹುದು? "ನೀವು ಕೋವಿಡ್ - 19 ಸೋಂಕಿನಿಂದ ಗುಣಮುಖರಾಗಿದ್ದು 18 ರಿಂದ 60 ವರ್ಷದವರಾಗಿದ್ದರೆ ಪ್ಲಾಸ್ಮಾ ...

ಖಾಸಗಿ ಆಸ್ಪತ್ರೆಗಳು 20% ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡಬೇಕು: ಅರವಿಂದ್ ಕೇಜ್ರಿವಾಲ್

ದೆಹಲಿಯ ಖಾಸಗಿ ಆಸ್ಪತ್ರೆಗಳು ತಮ್ಮ 20% ಹಾಸಿಗೆಗಳನ್ನು ಕೊರೊನಾ ವೈರಸ್‌ ರೋಗಿಗಳಿಗೆ ಮೀಸಲಿಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ. ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ದೆಹಲಿಯಲ್ಲಿ ಒಟ್ಟು 117 ಖಾಸಗಿ ಆಸ್ಪತ್ರೆಗಳಿವೆ. ಅವುಗಳಲ್ಲಿನ ಹಾಸಿಗೆಗಳಲ್ಲಿ ಕರೋನವೈರಸ್ ರೋಗಿಗಳಿಗೆ ಶೇ 20 ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಲು ತಿಳಿಸಲಾಗಿದೆ ಎಂದಿದ್ದಾರೆ. “ಕೋವಿಡ್-19 ಚಿಕಿತ್ಸೆಗೆ ಹೋಗುವವರಿಗೆ ಇಂದಿನಿಂದ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ 2,000 ಹೊಸ ಹಾಸಿಗೆಗಳು ಲಭ್ಯವಿರುತ್ತವೆ” ಅವುಗಳನ್ನು ಬಳಸಬಹುದು ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ. ಲಾಕ್‌ಡೌನ್‌ನಲ್ಲಿನ ಸಡಿಲತೆ ಕಾರಣ ದೆಹಲಿಯಲ್ಲಿ  ಕೋವಿಡ್ -19 ಪ್ರಕರಣಗಳು ಹೆಚ್ಚಿವೆ. ಆದರೆ ಮರಣ ಪ್ರಮಾಣ ಅಥವಾ ಗಂಭೀರ ಪ್ರಕರಣಗಳ ಸಂಖ್ಯೆ ವೇಗವಾಗಿ ಏರಿಕೆಯಾಗದಿದ್ದರೆ ಚಿಂತೆ ಇಲ್ಲ. ಜನರು ವೈರಸ್‌ಗೆ ತುತ್ತಾಗಿ ಚೇತರಿಸಿಕೊಂಡರೆ, ಚಿಂತೆ ಮಾಡಲು ಏನೂ ಇಲ್ಲ ಅವರು ತಿಳಿಸಿದ್ದಾರೆ. ಕೋವಿಡ್ -19 ಪ್ರಕರಣಗಳು ನಿಧಾನವಾಗಿ ಹೆಚ್ಚುತ್ತಿವೆ ಎಂದು ನಾನು ಒಪ್ಪಿಕೊಂಡರೂ ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹೆಚ್ಚಿನ ಪ್ರಕರಣಗಳಲ್ಲಿ ಸೌಮ್ಯ ಲಕ್ಷಣಗಳಿವೆ ಅಥವಾ ಲಕ್ಷಣರಹಿತವಾಗಿದೆ. ಹಾಗಾಗಿ ಅಂತವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಕೊರೊನಾ ವಿರುದ್ಧ ಅಪರೇಷನ್ ಶೀಲ್ಡ್ (S.H.I.E.L.D.)

ಕೊರೊನಾ ರುದ್ರ ಕುಣಿತಕ್ಕೆ, ಮಿಂಚಿನ ಓಟಕ್ಕೆ  ರಾಷ್ಟ್ರ ರಾಜಧಾನಿ ದೆಹಲಿ ಯಲ್ಲಿ  ಬ್ರೇಕ್ ಹಾಕಲು ಮುಂದಾಗಿರುವ ಕೇಜ್ರಿವಾಲ್ ಸರ್ಕಾರ ಆಪರೇಷನ್ ಶೀಲ್ಡ್ ಔಟ್ ಆರಂಭಿಸಿದ್ದು, ಆರು ಸೂತ್ರಗಳನ್ನು ಜಾರಿ ತರಲು ಮುಂದಾಗಿದೆ.  ಅಲ್ಲೊಂದು, ಇಲ್ಲೊಂದು ಪ್ರಕರಣ ಎಂದುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ‌ ಹಿಡಿತದಲ್ಲಿದ್ದೆ.  ಈವರೆಗೂ 720 ಪ್ರಕರಣಗಳು ಪತ್ತೆಯಾಗಿದ್ದು,  12 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 450ಕ್ಕೂ ಹೆಚ್ಚು ಕೇಸ್‍ಗಳು ಮರ್ಕಜ್ ಮೂಲದ್ದು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಕೊರೋನಾ ಸೋಂಕಿನ ಸಂಖ್ಯೆ ಕೈ ಮೀರಿ ಆಕಾಶದೆತ್ತರಕ್ಕೆ ಬೆಳೆಯದ್ದಂತೆ ದೆಹಲಿ ಸರ್ಕಾರ, ರಾಷ್ಟ್ರ ರಾಜಧಾನಿಯಲ್ಲಿ 100 ಪರ್ಸೆಂಟ್ ಸೀಲ್ಡ್ ಮಾದರಿಯನ್ನು ಜಾರಿಗೆ ತಂದಿದೆ.  ದೆಹಲಿಯಲ್ಲಿ 25 ಪ್ರದೇಶಗಳನ್ನು ಹಾಟ್‍ಸ್ಪಾಟ್ ಗಳನ್ನು ಗುರುತಿಸಿದ್ದು. ಈ ಪ್ರದೇಶದಲ್ಲಿ ಆಪರೇಷನ್ ಶೀಲ್ಡ್ ಘೋಷಣೆ ಮಾಡಿದ್ದಾರೆ. ಕೊರೊನಾ ವಿರುದ್ಧ ಆಪರೇಷನ್ ಶೀಲ್ಡ್ ಘೋಷಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರು ಸೂತ್ರಗಳನ್ನು ಜಾರಿಗೆ ತರಲು ಸಿದ್ಧವಾಗಿದ್ದಾರೆ.  1 .  ಮೊದಲ ಸೂತ್ರದ ಮೂಲಕ ಇಡೀ ಪ್ರದೇಶವನ್ನು ಸೀಲ್ ಮಾಡುವುದು ಮತ್ತು ಸೋಂಕಿತ ಪ್ರದೇಶವನ್ನು ಮ್ಯಾಪಿಂಗ್ ಮಾಡುವುದು. 2.  ಸೀಲ್ ಮಾಡಿರುವ ಪ್ರದೇಶದಲ್ಲಿರುವ ಎಲ್ಲ ಜನರು ಮನೆಯಲ್ಲೇ ಇರುವುದು ಕಡ್ಡಾಯ 3. ...

ಕೊರೋನಾವನ್ನು ಹೇಗೆ ಎದುರಿಸುತ್ತೆ ದೆಹಲಿ? ಅರವಿಂದ್ ಕೇಜ್ರೀವಾಲ್ ಅವರ ಫುಲ್ ಪ್ಲಾನ್ ರೆಡಿ

ರಾಜಧಾನಿ ದೆಹಲಿಯಲ್ಲಿ ಕೊರೋನಾ ನಿಯಂತ್ರಣಕ್ಕೇನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುವುದನ್ನು ಸಿಎಂ ಅರವಿಂದ್ ಕೇಜ್ರೀವಾಲ್ ಬಹಿರಂಗಪಡಿಸಿದ್ದಾರೆ.  ದೆಹಲಿ ಸರ್ಕಾರ 5T ಹೆಸರಿನ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಇದರಲ್ಲಿ ಟೆಸ್ಟಿಂಗ್, ಟ್ರೇನಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್, ಟೀಂ ವರ್ಕ್ ಹಾಗೂ ಟ್ರ್ಯಾಕಿಂಗ್ ಆಂಡ್ ಮಾನಿಟರಿಂಗ್ ಕೂಡಾ ಶಾಮೀಲಾಗಿದೆ. ಅಲ್ಲದೇ ದೆಹಲಿಯಲ್ಲಿ ಮುನ್ನೂರು ಸೋಂಕಿತರಿದ್ದರೂ ಚಿಕಿತ್ಸೆ ನೀಡಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ ಎಂದು ಕೇಜ್ರೀವಾಲ್ ತಿಳಿಸಿದ್ದಾರೆ. ಸದ್ಯ ಇಲ್ಲಿ ಐನೂರು ಸೋಂಕಿತರಿದ್ದು, ವೈದ್ಯರು ಹಾಗೂ ದಾದಿಯರೇ ಈ ಸಮರದ ಬಹುಮುಖ್ಯ ಯೋಧರೆಂದು ತಿಳಿಸಿದ್ದಾರೆ.  ವಿಡಿಯೋ ಸಂದೇಶದಲ್ಲಿ ಈ ಮಾಹಿತಿ ನೀಡಿರುವ ಅರವಿಂದ್ ಕೇಜ್ರೀವಾಲ್ ನಾವು ಕೊರೋನಾಗಿಂತ ಮೂರು ಹೆಜ್ಜೆ ಮುಂದಿರಬೇಕು. ನಿದ್ದೆ ಮಾಡುತ್ತಾ ಉಳಿದರೆ ಇದನ್ನು ನಿಯಂತ್ರಿಸೋದು ಅಸಾಧ್ಯ ಎಂದಿದ್ದಾರೆ.  ಟೆಸ್ಟಿಂಗ್ : ಟೆಸ್ಟಿಂಗ್ ನಡೆಯದೆ ಕೊರೋನಾ ಸೋಂಕು ಇದೆಯೋ ಇಲ್ಲವೋ ಎಂದು ತಿಳಿಯುವುದಿಲ್ಲ. ಹೀಗಾಗಿ ಟೆಸ್ಟಿಂಗ್ ಅತೀ ಅಗತ್ಯ ಎಂದಿದ್ದಾರೆ.  ಟ್ರೇಸಿಂಗ್ : ಕೊರೋನಾ ಸೋಂಕಿತ ಹದದಿನಾಲ್ಕು ದಿನಗಳಲ್ಲಿ ಯಾರು ಯಾರನ್ನು ಬೇಟಿಯಾದ. ಅವರೆಲ್ಲರನ್ನೂ ಟ್ರೇಸ್ ಮಾಡಲಾಗುತ್ತದೆ. ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಇದಕ್ಕೆ ಪೊಲೀಸರೂ ಸಹಾಯ ಮಾಡುತ್ತಿದ್ದಾರೆ ಎಂದು ಕೇಜ್ರೀವಾಲ್ ತಿಳಿಸಿದ್ದಾರೆ....

ಮೆಲಾನಿಯಾ ಭೇಟಿ ನೀಡಿದ್ದ ದೆಹಲಿ ಸರ್ಕಾರಿ ಶಾಲೆಯ 'ಹ್ಯಾಪಿನೆಸ್‌ ಕ್ಲಾಸ್‌'ಗಳು ವಿಶ್ವದ ಗಮನ ಸೆಳೆಯುತ್ತಿರುವುದೇಕೆ?

ಅಮೆರಿಕದ ಫಸ್ಟ್‌ ಲೇಡಿ ಮೆಲಾನಿಯಾ ಟ್ರಂಪ್‌ ಅವರು ದಿಲ್ಲಿಯ ಶಾಲೆಯೊಂದರ 'ಸಂತೋಷದ ತರಗತಿ'ಗೆ ಮಂಗಳವಾರ ಭೇಟಿ ನೀಡಿದರು. ಒತ್ತಡಮುಕ್ತ ಕಲಿಕೆಯ ಉದ್ದೇಶದಿಂದ ರೂಪುಗೊಂಡಿರುವ 'ಹ್ಯಾಪಿನೆಸ್‌ ಕ್ಲಾಸ್‌'ಗಳು ದೇಶ- ವಿದೇಶದ ತಜ್ಞರ ಗಮನ ಸೆಳೆಯುತ್ತಿವೆ. ದಕ್ಷಿಣ ದಿಲ್ಲಿಯ ಮೋತಿಬಾಗ್‌ನ ಸರ್ವೋದಯ ಕೋ ಎಜುಕೇಶನ್‌ ಸೀನಿಯರ್‌ ಸೆಕೆಂಡರಿ ಸ್ಕೂಲ್‌ಗೆ ಮಂಗಳವಾರ ವಿಶೇಷ ಭೇಟಿ ನೀಡಿದ ಮೆಲಾನಿಯಾ ಟ್ರಂಪ್‌, ಅಲ್ಲಿ ನಡೆಯುವ 'ಹ್ಯಾಪಿನೆಸ್‌ ಕ್ಲಾಸ್‌'ನ್ನು ವೀಕ್ಷಿಸಿದರು. ಶಾಲೆಯ ಮಕ್ಕಳು ಅವರನ್ನು ಆರತಿಯೆತ್ತಿ ತಿಲಕವಿಟ್ಟು ಬರಮಾಡಿಕೊಂಡರು. 45 ನಿಮಿಷಗಳ ಕ್ಲಾಸ್‌ ಚಟುವಟಿಕೆಯನ್ನು ಪೂರ್ತಿಯಾಗಿ ವೀಕ್ಷಿಸಿದ ಮೆಲಾನಿಯಾ, ತರಗತಿಯ ಬಗ್ಗೆ ಮಕ್ಕಳ ಅಭಿಪ್ರಾಯ ಪಡೆದುಕೊಂಡರು. ಕೆಲವು ಮಕ್ಕಳ ಪ್ರಾಜೆಕ್ಟ್ ವರ್ಕ್ ವೀಕ್ಷಿಸಿದರು. ಕೆಲವು ಮಕ್ಕಳೊಡನೆ ಮುಕ್ತವಾಗಿ ಹರಟಿದರು. ಒಂದು ಗಂಟೆಯ ಶಾಲೆ ಭೇಟಿಯ ಬಳಿಕ ಹೊರಟು ನಿಂತಾಗ ಅವರು ಹೇಳಿದ ಮಾತು: ''ಇಲ್ಲಿರುವ ಮಕ್ಕಳು ಪ್ರತಿದಿನದ ಮುಂಜಾನೆಯನ್ನು ಕತೆ ಹೇಳುವುದು, ಪ್ರಕೃತಿಯೊಡನೆ ಸಂಭಾಷಿಸುವುದರ ಮೂಲಕ ನೆಮ್ಮದಿಯಿಂದ ಆರಂಭಿಸುತ್ತಾರೆ. ಇದು ತುಂಬ ಸ್ಫೂರ್ತಿ ನೀಡುವಂಥದು. ನಮ್ಮ ದಿನವನ್ನು ಇದಕ್ಕಿಂತ ಅರ್ಥಪೂರ್ಣವಾಗಿ ಸ್ವಾಗತಿಸುವುದನ್ನು ನಾನು ಊಹಿಸಲಾರೆ.'' ತೆರಳುವ ಮುನ್ನ, ಮಕ್ಕಳಲ್ಲಿಉತ್ತಮ ಮೌಲ್ಯಗಳನ್ನು ಬೆಳೆಸುತ್ತಿರುವುದಕ್ಕಾಗಿ ಶಿಕ್...

ದೆಹಲಿ ಜನ ಅಭಿವೃದ್ಧಿಗೆ ಬೆಂಬಲಿಸಿದ್ದು ಯಾಕೆ!?

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಚುನಾವಣಾ ಆಯೋಗ ದೆಹಲಿಯ 70 ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ್ದು, ಆಡಳಿತಾರೂಢ ಆಪ್ 62 , ಬಿಜೆಪಿ 08 , ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಜಯ ದಾಖಲಿಸಿವೆ.  ಈ ಮೂಲಕ ಆಪ್ ಮತ್ತೆ ಅಧಿಕಾರ ಪಡೆದಿದ್ದು, ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಕಾಂಗ್ರೆಸ್ ಶೂನ್ಯ ಸ್ಥಾನ ಗಳಿಸುವ ಮೂಲಕ ದೆಹಲಿಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಸತತ ಮೂರನೇ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ದೆಹಲಿ ಗದ್ದುಗೆ ಪಡೆದಿದ್ದು ಹೇಗೆ ಎಂಬುದರ ಕುರಿತು ಇದೀಗ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಜನಪ್ರಿಯತೆಯನ್ನು ಮೀರಿ ಅರವಿಂದ್ ಕೇಜ್ರಿವಾಲ್ ಜಯಗಳಿಸಿದ್ದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಕಾರಣ ಏನು ಎಂಬುವುದರ ವಿವರ ಇಲ್ಲಿದೆ. ಸರಳ ಹಾಗೂ ಸ್ವಚ್ಛ ಆಡಳಿತ ದೆಹಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಭ್ರಷ್ಟಾಚಾರದ ವಿರುದ್ಧ ಆರಂಭಗೊಂಡ ಅಣ್ಣ ಹಜಾರೆ ಹೋರಾಟದಲ್ಲಿ ಹುಟ್ಟಿಕೊಂಡ ಪಕ್ಷ ಆಮ್ ಆದ್ಮಿ ಪಾರ್ಟಿ. ಆರಂಭದಲ್ಲಿಯೇ ತಮ್ಮ ವಿಭಿನ್ನ ಶೈಲಿಯ ರಾಜಕಾರಣದಲ್ಲಿ ಗಮನ ಸೆಳೆದವರು ಆಮ್ ಆದ್ಮಿಗಳು. ಸರಳ ಹಾಗೂ ಸ್ವಚ್ಛ ಆಡಳಿತದ ಭರ...

ನಂ 1 ಸ್ಥಾನದಲ್ಲಿ ದೆಹಲಿ ಸರ್ಕಾರಿ ಶಾಲೆ, ಭಾರತದ ಟಾಪ್ 10 ಶ್ರೇಯಾಂಕದಲ್ಲಿ ಇನ್ನೆರಡು ಸರ್ಕಾರಿ ಶಾಲೆ

ದೆಹಲಿಯ ಮೂರು ಶಾಲೆಗಳು ದೇಶದ ಉನ್ನತ 10 ಸರ್ಕಾರಿ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಅದರಲ್ಲಿ ಒಂದು ಶಾಲೆ ಪ್ರಥಮ ಸ್ಥಾನ ಪಡೆದಿದೆ.  ದ್ವಾರಕಾ ಸೆಕ್ಟರ್ 10ರ ರಾಜ್ಕಿಯಾ ಪ್ರತಿಭಾ ವಿಕಾಸ್ ವಿದ್ಯಾಲಯ (ಆರ್‌ಪಿವಿವಿ) ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಳೆದ ವಾರ ಎಜುಕೇಶನ್ ವರ್ಲ್ಡ್ ಎಂಬ ಶೈಕ್ಷಣಿಕ ಪೋರ್ಟಲ್ ‘ಇಂಡಿಯನ್ ಸ್ಕೂಲ್ ರ‍್ಯಾಂಕಿಂಗ್‌ 2019’ ಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ . ಎಜುಕೇಶನ್ ವರ್ಲ್ಡ್ ಅನ್ನು ದೇಶಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಬಳಸುತ್ತಿದ್ದಾರೆ.  ದ್ವಾರಕಾ ಸೆಕ್ಟರ್ 10ರ ರಾಜ್ಕಿಯಾ ಪ್ರತಿಭಾ ವಿಕಾಸ್ ವಿದ್ಯಾಲಯ (ಆರ್‌ಪಿವಿವಿ) ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದರೆ, ಆರ್‌ಪಿವಿವಿ ಲಜಪತ್ ನಗರ ಐದನೇ ಸ್ಥಾನಕ್ಕೆ ಏರಿದೆ. ಆರ್‌ಪಿವಿವಿ ರೋಹಿಣಿ ಏಳನೇ ಸ್ಥಾನ ಪಡೆದಿದೆ.  ಇಂಡಿಯನ್ ಸ್ಕೂಲ್ ರ‍್ಯಾಂಕಿಂಗ್‌ 2019 ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಮೂರೂ ಶಾಲೆಗಳ ಶಿಕ್ಷಕರ ಮತ್ತು ಪ್ರಾಂಶುಪಾಲರ ಶ್ರಮವನ್ನು ಅಭಿನಂದಿಸಿದರು ಮತ್ತು ತಮ್ಮ ಆಡಳಿತದಲ್ಲಿ ದೆಹಲಿ ಸರ್ಕಾರವು ಶಿಕ್ಷಣ ಮತ್ತು ಸರ್ಕಾರಿ ಶಾಲೆಯನ್ನು ಮೊದಲ ಆದ್ಯತೆಯನ್ನಾಗಿ ಮಾಡಿದೆ ಎಂದು ಹೇಳಿದರು.

ಉನ್ನತ ಶ್ರೇಣಿ ಪಡೆದ ಸರ್ಕಾರಿ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರದಿಂದ ಟ್ಯಾಬ್

ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರ ಟ್ಯಾಬ್ ಲೆಟ್ ಹಾಗೂ ಕಂಪ್ಯೂಟರ್ ಗಳನ್ನು ವಿತರಣೆ ಮಾಡಿದೆ.  ಪ್ರತಿಭಾ ವಿಕಾಸ್ ವಿದ್ಯಾಲಯಗಳ 11 ಹಾಗೂ 12 ನೇ ತರಗತಿ ವಿದ್ಯಾರ್ಥಿಗಳು ಹಾಗೂ ನಗರ ಸರ್ಕಾರಿ ಶಾಲೆಗಳ 10 ನೇ ತರಗತಿಯಲ್ಲಿ ಶೇ.80 ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಟ್ಯಾಬ್ ಹಾಗೂ ಕಂಪ್ಯೂಟರ್ ನ್ನು ವಿತರಿಸಿದ್ದಾರೆ.  21 ನೇ ಶತಮಾನದಲ್ಲಿ ಪ್ರತಿ ವಿದ್ಯಾರ್ಥಿಗಳ ಕೈಯಲ್ಲಿಯೂ ತಂತ್ರಜ್ಞಾನ ಇರಬೇಕು ಎಂದು ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಹೇಳಿದ್ದಾರೆ.  

ದೆಹಲಿಯಲ್ಲಿ 11,000 ಕಡೆ ಉಚಿತ ವೈಫೈ ಸೌಲಭ್ಯ

ವೈಫೈ ಹಾಟ್‌ಸ್ಪಾಟ್‌ಗಳ ಮೂಲಕ ನಿತ್ಯವೂ 1.5 ಜಿಬಿವರೆಗೂ ಡೇಟಾದ ಉಚಿತ ಅಂತರ್ಜಾಲ ಸೌಲಭ್ಯ ಒದಗಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಪ್ರಕಟಿಸಿದರು.  ಈ ಸವಲತ್ತಿನ ಮೂಲಕ ನಮ್ಮ ಪ್ರಣಾಳಿಕೆಯ ಕೊನೆಯ ಭರವಸೆಯನ್ನು ಪೂರ್ಣಗೊಳಿಸುತ್ತಿದ್ದೇವೆ. ಈ ಯೋಜನೆಯು ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದರು.  ರಾಷ್ಟ್ರದ ರಾಜಧಾನಿಯಾದ್ಯಂತ ಸುಮಾರು 11,000 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲು ಸರ್ಕಾರ ಉದ್ದೇಶಿಸಿದೆ. ಡಿ.16ರ ವೇಳೆಗೆ 100 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲಾಗುವುದು. ನಂತರ ಪ್ರತಿ ವಾರ 500 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲಾಗುವುದು. ಎಲ್ಲ ಹಾಟ್‌ಸ್ಪಾಟ್‌ಗಳನ್ನೂ ಆರು ವಾರದ ಒಳಗೆ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.  ಈ ಉದ್ದೇಶಕ್ಕಾಗಿ ಆಪ್ ಒಂದನ್ನು ಸಿದ್ಧಪಡಿಸಲಾಗುತ್ತಿದೆ. ಪ್ರೆಸ್ಟೋ ಎಂಬ ಕಂಪೆನಿ ಈ ಯೋಜನೆಯನ್ನು ನಿರ್ವಹಿಸುತ್ತಿದೆ. ದೆಹಲಿಯಾದ್ಯಂತ ಉಚಿತ ಇಂಟರ್ನೆಟ್ ಒದಗಿಸುವ ಈ ಯೋಜನೆಗೆ 100 ಕೋಟಿ ರೂ ವೆಚ್ಚ ತಗಲುತ್ತದೆ ಎಂದು ವಿವರಿಸಿದರು. ಇದರಿಂದ ದೆಹಲಿಯ ನಿವಾಸಿಗಳು ತಿಂಗಳಿಗೆ 15 ಜಿಬಿ ಡೇಟಾ ಪಡೆದುಕೊಳ್ಳಲಿದ್ದಾರೆ. 4,000 ಹಾಟ್‌ಸ್ಪಾಟ್‌ಗಳು ಬಸ್ ನಿಲ್ದಾಣಗಳಲ್ಲಿ ಲಭ್ಯವಾಗಲಿವೆ. ಇನ್ನು 7,000 ಮಾರುಕಟ್ಟೆ, ನಿವಾಸಿ ಅಭಿವೃದ್ಧಿ ಸಂಸ್ಥೆಗಳು ಮತ್ತು ನಗರದ ಇತರೆ ಸ್ಥಳಗಳಲ್ಲಿ ಸಿಗಲಿವೆ ಎಂದರು.  ಕನಿಷ...

ದೆಹಲಿಯಲ್ಲಿ 26.60 ಲಕ್ಷ ಆಮ್ ಆದ್ಮಿಗಳಿಗೆ ಬಂತು ಶೂನ್ಯ ವಿದ್ಯುತ್ ಶುಲ್ಕ: ಇದಕ್ಕೆ ಕಾರಣ ಇಲ್ಲಿದೆ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಹು ನಿರೀಕ್ಷಿತ ಯೋಜನೆ ‘ಮುಖ್ಯಮಂತ್ರಿ ಕಿರಯೇದಾರ್ ಬಿಜಲಿ ಮೀಟರ್ ಯೋಜನಾ’ ಅಡಿಯಲ್ಲಿ ರಾಷ್ಟ್ರ ರಾಜಧಾನಿಯ ಸುಮಾರು 26.60 ಲಕ್ಷ ಕುಟುಂಬಗಳಿಗೆ ನವೆಂಬರ್ ತಿಂಗಳಲ್ಲಿ ಶೂನ್ಯ ವಿದ್ಯುತ್ ಶುಲ್ಕ ಬಂದಿದೆ. ಈ ಯೋಜನೆ ಅಡಿಯಲ್ಲಿ 201 ಯುನಿಟ್ ಗಳಿಂದ 400 ಯುನಿಟ್ ಗಳವರೆಗಿನ ವಿದ್ಯುತ್ ಬಳಕೆಯ ಶುಲ್ಕದ ಮೇಲೆ ಸರಕಾರವು 50 ಪ್ರತಿಶತ ಸಬ್ಸಿಡಿಯನ್ನು ಒದಗಿಸುತ್ತದೆ. ಮತ್ತು 200 ಯುನಿಟ್ ಗಳವರೆಗಿನ ವಿದ್ಯುತ್ ಬಳಕೆ ಉಚಿತವಾಗಿರುತ್ತದೆ. ಪ್ರಾರಂಭದಲ್ಲಿ ಈ ಯೋಜನೆಯ ಪ್ರಯೋಜನವನ್ನು ಸ್ವಂತ ಮನೆ ಹೊಂದಿರುವವರಿಗೆ ಮಾತ್ರವೇ ನೀಡಲಾಗಿತ್ತು ಆದರೆ ಆ ಬಳಿಕ ಇದನ್ನು ಬಾಡಿಗೆದಾರ ಕುಟುಂಬಗಳಿಗೂ ವಿಸ್ತರಿಸಲಾಗಿತ್ತು. ಸೆಪ್ಟಂಬರ್2019 :  ನಗರದಲ್ಲಿರುವ ಒಟ್ಟು 52.27 ಲಕ್ಷ ಗೃಹೋಪಯೋಗಿ ವಿದ್ಯುತ್ ಗ್ರಾಹಕರಲ್ಲಿ ಸುಮಾರು 28 ಪ್ರತಿಶತ ಅಂದರೆ ಸುಮಾರು 14.64 ಲಕ್ಷ ಕುಟುಂಬಗಳಿಗೆ ಸೆಪ್ಟಂಬರ್ ತಿಂಗಳಲ್ಲಿ ಶೂನ್ಯ ವಿದ್ಯುತ್ ಶುಲ್ಕ ಬಂದಿದೆ ಎಂದು ಇಂಧನ ಇಲಾಖೆ ಬಿಡುಗಡೆಗೊಳಿಸಿರುವ ಮಾಹಿತಿ ತಿಳಿಸಲಾಗಿತ್ತು. ದೆಹಲಿಗೆ ಮೂರು ಪ್ರಮುಖ ವಿದ್ಯುತ್ ಪೂರೈಕೆ ಕಂಪೆನಿಗಳು ವಿದ್ಯುತ್ ಸೌಲಭ್ಯವನ್ನು ಒದಗಿಸುತ್ತಿವೆ ಮತ್ತು ದಕ್ಷಿಣ ಮತ್ತು ಪಶ್ಚಿಮ ದೆಹಲಿಯ ನಿವಾಸಿಗಳು ಈ ಯೋಜನೆಯ ಗರಿಷ್ಠ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯ ಕುರಿತಾಗಿ ಸೆಪ್ಟಂಬರ್ ನಲ್ಲಿ ಟ್ವೀಟ್ ಮೂಲಕ ಸಂತಸವ...

ಕೇಜ್ರಿವಾಲರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ಕರ್ನಾಟಕದ ಮಾಜಿ ಸ್ಪೀಕರ್ ರಮೇಶ್ ಶ್ಲಾಘನೆ

ಕರ್ನಾಟಕದ ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್‍ ರವರು ದೆಹಲಿ ಶಾಲೆಗಳ ಗುಣಮಟ್ಟವನ್ನು ನೋಡಿ ಸಂತೋಷಸಹಿತ ಆಶ್ಚರ್ಯ ವ್ಯಕ್ತಪಡಿಸಿ, ಅರವಿಂದ ಕೇಜ್ರಿವಾಲ್‍ರಂತಹ ಪ್ರಾಮಾಣಿಕ ನಾಯಕರ ಅಗತ್ಯ ದೇಶಕ್ಕಿದೆ ಎಂದಿದ್ದಾರೆ.  ಸಾರ್ವಜನಿಕ ಶಿಕ್ಷಣ ಕ್ಷೇತ್ರವು ಖಾಸಗೀಕರಣಗೊಂಡು ಖಾಸಗಿಯವರು ಮೇಲುಗೈ ಸಾಧಿಸಿದ್ದು, ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಿ ಮಾರಾಟಕ್ಕಿಟ್ಟಿರುವ ಸಂದರ್ಭದಲ್ಲಿ ಶಿಕ್ಷಣವು ಕೆಲವೇ ಕೆಲವು ಜನರ ಸ್ವತ್ತಾಗುತ್ತಿದೆ.  ಕೆಳವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಭಾರತದ ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟನ್ನು ಬಗೆಹರಿಸಲು ಕೇವಲ ಶಿಕ್ಷಕರಿಂದ ಸಾಧ್ಯವಿಲ್ಲ. ಉತ್ತಮ ತರಬೇತಿ ಪಡೆದ ಶಿಕ್ಷಕರ ಜೊತೆಗೆ ದೂರದೃಷ್ಟಿಯುಳ್ಳ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಸರ್ಕಾರವೂ ಕೈಜೋಡಿಸಬೇಕು. ಅಂತಹ ಮೌಲ್ಯಯುತವಾದ ಕೆಲಸವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಡಿದ್ದಾರೆ.  ಭಾರತದಂತಹ ದೇಶದಲ್ಲಿ ಸರ್ಕಾರವೊಂದು ಇಂತಹ ಅದ್ಭುತವಾದ, ಉತ್ತಮ ಗುಣಮಟ್ಟದ ಶಾಲೆಗಳನ್ನು ಕಟ್ಟಲು ಸಾಧ್ಯವೇ ಎಂದು ಆಶ್ಚರ್ಯವಾಯಿತು. ಖಾಸಗಿ ಶಾಲೆಗಳನ್ನು ಮೀರಿಸುವಂತಹ ಅತ್ಯುತ್ತಮ ದರ್ಜೆಗೆ ಸರ್ಕಾರಿ ಶಾಲೆಗಳನ್ನು ಏರಿಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬದಿಂದ ಬಂದ ಮಕ್ಕಳ ಬದುಕಿಗೆ ಅರ್ಥ ಕಲ್ಪಿಸಿದ್ದಾರೆ.  ಶಾಲೆಗಳಲ್ಲಿ ಶಿಕ್ಷಕರ ಬದ್ಧತೆ ಮತ್ತು ಮಕ್ಕಳ ಮೇಲೆ ಅವರಿಗಿರುವ ಕಾಳಜಿಯು ವ...

ದೆಹಲಿಯಲ್ಲಿ ಅಕ್ಟೋಬರ್ 29ರಿಂದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

ದೆಹಲಿಯ ಸರ್ಕಾರಿ ಬಸ್‌ಗಳಲ್ಲಿ ಅಕ್ಟೋಬರ್ 29ರಿಂದ ಮಹಿಳೆಯರಿಗೆ ಉಚಿತ ಪ್ರಯಾಣಾವಕಾಶ ಕಲ್ಪಿಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಅಕ್ಟೋಬರ್ 29ರಿಂದ ದೆಹಲಿಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದರು.  ಕಳೆದ ಕೆಲವು ದಿನಗಳ ಹಿಂದಷ್ಟೇ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದಾಗಿ ಘೋಷಿಸಿದ್ದರು. ಅದಾದ ಬಳಿಕ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ನಂತರ ಪ್ರತಿ ಯುನಿಟ್‌ಗೆ ಅರ್ಧ ದರ ಎಂದು ಘೋಷಿಸಿದ್ದರು.  ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಯೋಜನೆಯಡಿಯಲ್ಲಿ ದೆಹಲಿ ಸರ್ಕಾರವು 700 ಕೋಟಿ ರೂಗಳನ್ನು ವೆಚ್ಚ ಮಾಡುತ್ತಿದೆ. ಸರ್ಕಾರವೇ ಟಿಕೆಟ್‌ಗಳನ್ನು ಖರೀದಿಸಲಿದೆ  ಎಂದರು .

ದೆಹಲಿಯಲ್ಲಿ ಉಚಿತ ನೀರು, ವಿದ್ಯುತ್ ಆಯ್ತು ಇದೀಗ ಉಚಿತ ವೈಫೈ ಸೌಲಭ್ಯ ಘೋಷಣೆ

ಇತ್ತೀಚೆಗಷ್ಟೇ 200 ಯೂನಿಟ್ ವರೆಗೆ ವಿದ್ಯುತ್ ಬಳಕೆ ಉಚಿತ ಎಂದು ಘೋಷಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಉಚಿತ ವೈಫೈ ಸೌಲಭ್ಯವನ್ನು ನೀಡುವ ಭರವಸೆಯನ್ನೂ ಕೂಡ ನೀಡಿದ್ದಾರೆ.  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರದಂದು ರಾಷ್ಟ್ರದ ರಾಜಧಾನಿಯಲ್ಲಿ ಉಚಿತ ವೈ-ಫೈ ಇಂಟರ್ನೆಟ್ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ. ಪ್ರತಿ ಬಳಕೆದಾರರಿಗೆ 15 ಜಿಬಿ ಡೇಟಾವನ್ನು ಉಚಿತವಾಗಿ ಪ್ರತಿ ತಿಂಗಳು 200 ಎಂಬಿಪಿಎಸ್ ವೇಗದಲ್ಲಿ ಇಂಟರ್ ನೆಟ್ ನೀಡಲಾಗುವುದು ಎಂದು ಹೇಳಿದರು.  ಕೆಲವು ತಿಂಗಳ ಹಿಂದೆ ಅಷ್ಟೇ ಮಹಿಳೆಯರಿಗೆ ಉಚಿತ ಮೆಟ್ರೋ ಸೇವೆ ಒದಗಿಸುವ ಪ್ರಸ್ತಾವವನ್ನು ಇಟ್ಟಿದ್ದರು.  ಮೊದಲ ಹಂತದ ಭಾಗವಾಗಿ ದೆಹಲಿಯಾದ್ಯಂತ 11,000 ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲಾಗುವುದು.ಈಗಾಗಲೇ ಉಚಿತ ವೈ-ಫೈ ಒದಗಿಸುವ ಕೆಲಸ ಪ್ರಾರಂಭವಾಗಿದೆ .ಈ ಯೋಜನೆ ಇನ್ನು ಮೂರು ನಾಲ್ಕು ತಿಂಗಳ ಅವಧಿಯ ಒಳಗೆ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೊದಲ ಹಂತದ ಭಾಗವಾಗಿ ಒಟ್ಟು 11,000 ಹಾಟ್‌ಸ್ಪಾಟ್‌ಗಳಲ್ಲಿ 4,000 ಅನ್ನು ಬಸ್ ನಿಲ್ದಾಣಗಳಲ್ಲಿ ಸ್ಥಾಪಿಸಲಾಗುವುದು ಮತ್ತು ಉಳಿದ 7,000 ದೆಹಲಿಯಾದ್ಯಂತದ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ಇತ್ತೀಚೆಗಷ್ಟೇ ಉಚಿತ ವಿದ್ಯುತ್ ಸೌಲಭ್...

ದೆಹಲಿಯಲ್ಲಿ 200 ಯೂನಿಟ್ಸ್‌ವರೆಗಿನ ವಿದ್ಯುತ್ ಬಳಕೆ ಉಚಿತ: ನಂತರ ಅರ್ಧ ಬೆಲೆ ಮಾತ್ರ

ಇನ್ನುಮುಂದೆ 200 ಯೂನಿಟ್ಸ್ವರೆಗಿನ ವಿದ್ಯುತ್ ಬಳಕೆ ಉಚಿತ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಘೋಷಣೆ ಮಾಡಿದೆ.  ಸುಮಾರು 200 ಯೂನಿಟ್‌ ವರೆಗಿನ ವಿದ್ಯುತ್‌ ಅನ್ನು ಇಂದಿನಿಂದ ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. 201ರಿಂದ 400 ಯೂನಿಟ್‌ಗಳವರೆಗಿನ ವಿದ್ಯುತ್‌ ಬಳಕೆಗೆ ಅರ್ಧ ಬೆಲೆಯನ್ನು ವಿಧಿಸುವುದಾಗಿ ತಿಳಿಸಿದ್ದಾರೆ.  ಅವರ ಪ್ರಕಾರ, ಬೇಸಿಗೆಯಲ್ಲಿ 200 ಯೂನಿಟ್ಸ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ದೆಹಲಿಯ ಸುಮಾರು ಶೇ. 33ರಷ್ಟು ಬಳಕೆದಾರರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಚಳಿಗಾಲದಲ್ಲಿ ಶೇ. 70ರಷ್ಟು ಜನರು 200 ಯೂನಿಟ್ಸ್‌ಗಿಂತಲೂ ಕಡಿಮೆ ವಿದ್ಯುತ್‌ ಅನ್ನು ಬಳಸುತ್ತಿದ್ದಾರೆ ಎನ್ನುತ್ತಾರೆ.  ಇನ್ನು ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಟ್ವೀಟ್‌ ಮಾಡಿ, ಉತ್ತಮ ಶಿಕ್ಷಣ ಮತ್ತು ಆರೋಗ್ಯದ ರಕ್ಷಣೆಯಂತೆಯೇ ಮನೆಯಲ್ಲಿ ದೀಪ ಅಥವಾ ಫ್ಯಾನ್‌ಗಳನ್ನು ಚಲಾಯಿಸಲು ಮೂಲಭೂತ ಪ್ರಮಾಣದ ವಿದ್ಯುತ್ ಅತ್ಯಗತ್ಯ ಎಂದು ಟ್ವೀಟ್‌ ಮಾಡಿ ಪೆಹಲೆ ಹಾಫ್‌ ಅಬ್‌ ಮಾಫ್‌ ಎಂಬ ಹ್ಯಾಷ್‌ಟ್ಯಾಗ್‌ ಹಾಕಿದ್ದಾರೆ.  ಇಂದು ದೇಶದಲ್ಲಿ ಅಗ್ಗದ ವಿದ್ಯುತ್‌ ದೆಹಲಿಯಲ್ಲಿದೆ. ಇದು ವಿದ್ಯುತ್‌ ಉಳಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ. ವಿಐಪಿಗಳು ಮತ್ತು ದೊಡ್ಡ ರಾಜಕಾರಣಿಗಳಿಗೆ ಉಚಿತವಾಗಿ ವ...

ಶಾಲಾ ನಿರ್ವಹಣಾ ಸಮಿತಿ - ದೆಹಲಿಯ ಶಾಲಾ ನಿರ್ಧಾರಗಳಲ್ಲಿ ಪೋಷಕರ ಪಾತ್ರ

ದೆಹಲಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣದ ಕ್ಷೇತ್ರದಲ್ಲಿ ಒಂದು ಕ್ರಾಂತಿ ನಡೆಯುತ್ತಿದೆ. ಸರ್ಕಾರಿ ಶಾಲೆಯನ್ನು ಇಲ್ಲಿಯವರೆಗೆ ನಿರ್ಲಕ್ಷ್ಯ ಮತ್ತು ಕಡೆಗಣಿಸಲಾಗಿತ್ತು, ಈಗ ಸರ್ಕಾರಿ ಶಾಲೆಗಳ ಪುನರುಜ್ಜೀವನವನ್ನು ಮಾಡಲಾಗುತ್ತಿದೆ, ಅದಕ್ಕೆ ಸಾಕ್ಷಿಯಾಗಿ ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಆಡಳಿತ ಮತ್ತು ಮೂಲಸೌಕರ್ಯಗಳನ್ನು , ದೆಹಲಿ ಸರ್ಕಾರವು ತೆಗೆದ ನಿರ್ಧಾರಗಳ ಮೂಲಕ ಎಲ್ಲವನ್ನೂ ಶಕ್ತಿಯುತಗೊಳಿಸಲಾಗುತ್ತಿದೆ ಮತ್ತು ಪುನಶ್ಚೇತನಗೊಳಿಸಲಾಗುತ್ತಿದೆ. ದೆಹಲಿ ಸರ್ಕಾರದ ಮಾಜಿ ಶಿಕ್ಷಣ ಸಲಹೆಗಾರ್ತಿ ಅತೀಶಿಯವರು ಹೇಳಿದ್ದಂತೆ, "ವಿಶ್ವದ ಇತಿಹಾಸದಲ್ಲಿ ಯಾವುದೇ ದೇಶವು ತನ್ನ ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡದೆ ಅಭಿವೃದ್ಧಿಗೊಂಡಿಲ್ಲ."  ಎಲ್ಲಾ ಪಾಲುದಾರರು ಸರಿಯಾದ ಕೆಲಸ ಮಾಡಲಿದ್ದಾರೆ ಎಂಬ ಆಳವಾದ ನಂಬಿಕೆಯೇ ಈ ಸುಧಾರಣೆಯ ಒಂದು ರಹಸ್ಯ. ಉದಾಹರಣೆಗೆ, ಕಳೆದ ನಾಲ್ಕು ವರ್ಷಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಒಳಪಡುವ ಶಾಲಾ ನಿರ್ವಹಣಾ ಸಮಿತಿಗಳಿಗೆ (ಎಸ್.ಎಂ.ಸಿ.ಗಳು) ದೆಹಲಿ ಸರ್ಕಾರವು ಶಾಲೆಗಳ ಆಡಳಿತವನ್ನು ವಿಕೇಂದ್ರೀಕರಿಸಿದೆ. ಇದು ಸಾರ್ವಜನಿಕ ಶಾಲೆಗಳ...

ಭಾರತಕ್ಕೆ ಅಗತ್ಯವಿರುವ ಬದಲಾವಣೆ

- ಅರವಿಂದ್ ಕೇಜ್ರಿವಾಲ್  ಉತ್ತಮ ಶಿಕ್ಷಿತ ನಾಗರಿಕರಿಲ್ಲದ ಯಾವುದೇ ಅಭಿವೃದ್ಧಿ ಹೊಂದಿದ ದೇಶವಿಲ್ಲ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಎಣಿಸಬೇಕೆಂದು ಭಾರತ ಬಯಸಿದರೆ ಎಲ್ಲಾ ನಾಗರಿಕರಿಗೆ ಉತ್ತಮ ಶಿಕ್ಷಣವನ್ನು ಒದಗಿಸುವುದು ಅವಶ್ಯಕ. ಅಭಿವೃದ್ಧಿಯ ಬಗ್ಗೆ ಮಾತನಾಡುವುದು ಸುಲಭ. ಆದರೆ, ಇದು ವಾಸ್ತವವಾಗಿ ನಡೆಯಲು ಕಷ್ಟದ ಪ್ರಯತ್ಮಗಳನ್ನು ಮಾಡಬೇಕಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ದೆಹಲಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಸುಧಾರಣೆಗಳು ನಡೆದಿದೆ. ನಾವು ಅಧಿಕಾರ ವಹಿಸಿಕೊಂಡಾಗ, ಸರ್ಕಾರಿ ಶಾಲೆಗಳು ಕೆಟ್ಟ ಸ್ಥಿತಿಯಲ್ಲಿದ್ದವು. ಶೌಚಾಲಯಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅನೇಕ ಶಾಲೆಗಳಲ್ಲಿ ಸರಿಯಾದ ಕುಡಿಯುವ ನೀರಿನ ಸೌಲಭ್ಯಗಳಿರಲಿಲ್ಲ. ಪೀಠೋಪಕರಣಗಳು ಮುರಿಯಲ್ಪಟ್ಟಿದ್ದವು. ಬ್ಲ್ಯಾಕ್ ಬೋರ್ಡ್ ಗಳು ಹಳೆಯದಾಗಿದ್ದವು. ಯಾವುದೇ ಶುಚಿತ್ವ ಇಲ್ಲದಿರುವುದು. ಕಟ್ಟಡಗಳು ಹಾಳು ಬಿದ್ದಿರುವುದು. ಅನೇಕ ತರಗತಿಗಳಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು. ಸಂಕ್ಷಿಪ್ತವಾಗಿ, ಸರ್ಕಾರಿ ಶಾಲೆಗಳು ಅತೀ ಕತ್ತಲೆ ಕವಿದ ಸ್ಥಿತಿಯಲ್ಲಿತ್ತು.  ನಾವು ಅಧಿಕಾರ ವಹಿಸಿಕೊಂಡ ತಕ್ಷಣ, ನಾವು 500 ಕೋಟಿ ರೂ.ಗಳಿಂದ 1,000 ಕೋಟಿ ರೂ.ಗೆ ಶಿಕ್ಷಣದ ವೆಚ್ಚವನ್ನು ದ್ವಿಗುಣಗೊಳಿಸಿದ್ದೇವೆ. ನಾವು ಮೊದಲು ಮೂಲಸೌಕರ್ಯದ ಕೊರತೆಯನ್ನು ನಿಭಾಯಿಸಿದ್ದೇವೆ. ಶುಚಿತ್ವ, ಭದ್ರತೆ, ಶೌಚಾಲಯಗಳು ಮತ್ತು ಕುಡಿಯುವ ನೀರು - ಈ ನಾಲ್ಕು ಪ್...