ಕೊರೊನಾ ರುದ್ರ ಕುಣಿತಕ್ಕೆ, ಮಿಂಚಿನ ಓಟಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬ್ರೇಕ್ ಹಾಕಲು ಮುಂದಾಗಿರುವ ಕೇಜ್ರಿವಾಲ್ ಸರ್ಕಾರ ಆಪರೇಷನ್ ಶೀಲ್ಡ್ ಔಟ್ ಆರಂಭಿಸಿದ್ದು, ಆರು ಸೂತ್ರಗಳನ್ನು ಜಾರಿ ತರಲು ಮುಂದಾಗಿದೆ.
ಅಲ್ಲೊಂದು, ಇಲ್ಲೊಂದು ಪ್ರಕರಣ ಎಂದುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಡಿತದಲ್ಲಿದ್ದೆ. ಈವರೆಗೂ 720 ಪ್ರಕರಣಗಳು ಪತ್ತೆಯಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 450ಕ್ಕೂ ಹೆಚ್ಚು ಕೇಸ್‍ಗಳು ಮರ್ಕಜ್ ಮೂಲದ್ದು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಕೊರೋನಾ ಸೋಂಕಿನ ಸಂಖ್ಯೆ ಕೈ ಮೀರಿ ಆಕಾಶದೆತ್ತರಕ್ಕೆ ಬೆಳೆಯದ್ದಂತೆ ದೆಹಲಿ ಸರ್ಕಾರ, ರಾಷ್ಟ್ರ ರಾಜಧಾನಿಯಲ್ಲಿ 100 ಪರ್ಸೆಂಟ್ ಸೀಲ್ಡ್ ಮಾದರಿಯನ್ನು ಜಾರಿಗೆ ತಂದಿದೆ.
1. ಮೊದಲ ಸೂತ್ರದ ಮೂಲಕ ಇಡೀ ಪ್ರದೇಶವನ್ನು ಸೀಲ್ ಮಾಡುವುದು ಮತ್ತು ಸೋಂಕಿತ ಪ್ರದೇಶವನ್ನು ಮ್ಯಾಪಿಂಗ್ ಮಾಡುವುದು.
2. ಸೀಲ್ ಮಾಡಿರುವ ಪ್ರದೇಶದಲ್ಲಿರುವ ಎಲ್ಲ ಜನರು ಮನೆಯಲ್ಲೇ ಇರುವುದು ಕಡ್ಡಾಯ
3. ಈ ತಂತ್ರದಲ್ಲಿ ಸೋಂಕಿತ ವ್ಯಕ್ತಿಯ ಮೊದಲ ಮತ್ತು ಎರಡನೇ ಹಂತದ ಸಂಪರ್ಕಗಳನ್ನು ಗುರುತಿಸಿ ಐಸೊಲೇಷನ್ ಮಾಡುವುದು.
4. ತುರ್ತು ಅಗತ್ಯ ವಸ್ತುಗಳನ್ನು ಸೀಲ್ಡ್ ಪ್ರದೇಶದಲ್ಲಿ ಹೋಂ ಕ್ವಾರಂಟೇನ್‍ನಲ್ಲಿರುವ ಮಂದಿಗೆ ಸರ್ಕಾರದಿಂದಲೇ ಪೂರೈಕೆ.
5. ಸ್ಥಳೀಯ ಆಡಳಿತದಿಂದ ಇಡೀ ಪ್ರದೇಶ ಮತ್ತು ಪ್ರತಿ ಮನೆಯನ್ನು ಸ್ಯಾಜಿಟೈಜ್ ಮಾಡುವುದು.
6. ಇನ್ನು ಸೀಲ್ ಆಗಿರುವ ಪ್ರದೇಶದಲ್ಲಿ ಒಬ್ಬೇ ಒಬ್ಬ ವ್ಯಕ್ತಿಯನ್ನು ಬಿಡದೇ ಪ್ರತಿ ಮನೆಗೂ ಹೋಗಿ ಅವರ ಆರೋಗ್ಯ ತಪಾಸಣೆ ನಡೆಸುವುದು. ರೋಗದ ಲಕ್ಷಣಗಳು ಕಂಡು ಬಂದ ವ್ಯಕ್ತಿಯನ್ನು ಐಸೊಲೇಷನ್ ಮಾಡುವುದು.

ಹೀಗೆ ಸಾಮಾನ್ಯ ಜನರು ಮಾತ್ರವಲ್ಲದೇ ವೈದ್ಯರನ್ನು ಕೂಡ ಕಾಡುತ್ತಿರುವ ಕೊರೊನಾ ವಿರುದ್ಧ ಆಪರೇಷನ್ 100% ಸೀಲ್ ಜಾರಿಗೆ ತಂದಿರುವ ದೆಹಲಿ ಸರ್ಕಾರ ರಣ ಕಹಳೆ ಮೊಳಗಿಸಿದೆ. ಆರು ಸೂತ್ರಗಳ ಮೂಲಕ ಕೊರೊನಾ ಹೆಮ್ಮಾರಿಯನ್ನು ಹಿಮ್ಮೆಟ್ಟಿಸಲು ಸಿದ್ಧವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ