ಚಿತ್ರ ಕ್ರೆಡಿಟ್ಸ್: ಅತಿಶಿ ಮಾರ್ಲೆನಾ/ಟ್ವಿಟರ್ |
ನೀವು ಸರ್ಕಾರಿ ಶಾಲೆಯ ಬಗ್ಗೆ ಯೋಚಿಸುವಾಗ ನಿಮ್ಮ ಮನಸ್ಸಿಗೆ ಏನು ಬರುತ್ತದೆ? ಬೆಂಚುಗಳೇ ಇಲ್ಲದ ತರಗತಿಗಳು, ಒಟ್ಟಾರೆಯಾಗಿ ಕಳಪೆ ಮೂಲಸೌಕರ್ಯ? ಆದರೆ, ಈ ಒಂದು ನೋಟ ಇದನ್ನು ಬದಲಿಸುತ್ತದೆ. ಈ ಶಾಲೆಗಳು ಆಧುನಿಕ, ಹತ್ತಿರದ ಯಾವುದೇ ಖಾಸಗಿ ಶಾಲೆಗಳಂತಹ ಸುಸಜ್ಜಿತ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತವೆ. ಇವೆಲ್ಲಾ ಅತ್ಯಲ್ಪ ಶುಲ್ಕದಲ್ಲಿ.
Yesterday a friend called - the Principal of a private school had seen pictures of the new desks in Delhi Govt schools and wanted to buy the same for their private school.— Atishi Marlena (@AtishiMarlena) August 2, 2018
Now Pvt schools want to follow govt schools! Who would have thought this was possible?! pic.twitter.com/BPK0vHF6SN
ಈ ಬದಲಾವಣೆ ಹೇಗೆ ?
ಬಜೆಟ್ ನಲ್ಲಿ ಶೇ.26ರಷ್ಟು ಭಾಗವನ್ನು ಶಿಕ್ಷಣಕ್ಕೆ ಮೀಸಲು
ದೆಹಲಿ ಸರ್ಕಾರದ ಮೊದಲ ಆದ್ಯತೆ ಶಿಕ್ಷಣ ಎಂದು ಯಾವುದೇ ಸಂಶಯವಿಲ್ಲದೆ ಸ್ಪಷ್ಟಪಡಿಸಿದೆ. ಮಾರ್ಚ್ 22ರಂದು ಬಜೆಟ್ ಮಂಡಿಸಿದ ದೆಹಲಿ ಹಣಕಾಸು ಸಚಿವ ಮನೀಶ್ ಸಿಸೋಡಿಯ ಮಾತನಾಡುತ್ತಾ, "ನಮ್ಮ ಸರ್ಕಾರ ದೆಹಲಿಯನ್ನು ಶೈಕ್ಷಣಿಕ ಕೇಂದ್ರವಾಗಿ ಮಾಡಲು ಬಯಸಿದೆ ಮತ್ತು ಈ ದಿಕ್ಕಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ." ಎಂದಿದ್ದರು.
2018-19ರ ಸಾಲಿನ ಬಜೆಟ್ ನಲ್ಲಿ 26.3% ರಷ್ಟು ಮೊತ್ತವನ್ನು ಮೀಸಲಿರಿಸಲಾಗಿದೆ. ಇದರಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪಾಲು ನೀಡಲಾಗಿದೆ. ಕಳೆದ ವರ್ಷ 23.7% ನಿಗದಿಪಡಿಸಲಾಗಿತ್ತು. ಈ ವರ್ಷ ಹಂಚಿಕೆಯಲ್ಲಿ 2.6% ಏರಿಕೆಯಾಗಿದೆ. ಶಿಕ್ಷಣ ಕ್ಷೇತ್ರಕ್ಕೆ, 19 ರಾಜ್ಯಗಳ 2017-18ರ ಸರಾಸರಿ ಬಜೆಟ್ ಅಂದಾಜು ಕೇವಲ 16.1% ಎಂಬುವುದು ಗಮನಾರ್ಹ.
BE- Budget Estimates; RE-Revised Estimates |
ಸಿಸೋಡಿಯ ಅವರ ಪ್ರಕಾರ, 9981 ತರಗತಿ ಕೊಠಡಿಗಳು, 1೦6 ವಿವಿಧೋದ್ದೇಶ ಸಭಾಂಗಣಗಳು, 328 ಪ್ರಯೋಗಾಲಯಗಳು, 204 ಗ್ರಂಥಾಲಯಗಳು/ಪ್ರಾಂಶುಪಾಲಕರ ಮತ್ತು ಉಪ ಪ್ರಾಂಶುಪಾಲಕರ/ಸಿಬ್ಬಂದಿ ಕೊಠಡಿಗಳು ಮತ್ತು 1067 ಶೌಚಾಲಯಗಳನ್ನು ಸೇರಿದಂತೆ 12748 ಕೊಠಡಿಗಳನ್ನು ಸ್ಥಾಪಿಸಲು ದೆಹಲಿ ಸರ್ಕಾರ ಯೋಜಿಸಿದೆ. ಅನೇಕ ವಿದ್ಯಾರ್ಥಿಗಳು ಈಗ ಖಾಸಗಿ ಶಾಲೆಗಳನ್ನು ಬಿಟ್ಟು ಸರ್ಕಾರಿ ಶಾಲೆಗಳನ್ನು ಸೇರುತ್ತಿರುವುದರಿಂದ ಹೆಚ್ಚುವರಿ ಒತ್ತಡವಿದೆ ಎಂದು ಸಿಸೋಡಿಯ ಹೇಳಿರುವುದಾಗಿ ಪತ್ರಿಕೆ ಪ್ರಕಟಿಸಿದೆ.
ಗುಣಮಟ್ಟ ಸುಧಾರಿಸುವ ಪ್ರಯತ್ನಗಳು ಮುಂದುವರೆದಿದೆ
ಶಿಕ್ಷಣದ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ದೆಹಲಿ ಸರ್ಕಾರ ಹೆಚ್ಚಿನ ಪ್ರಯತ್ನಗಳನ್ನು ಮಾಡಿದೆ. ಇದರ ಫಲಿತಾಂಶಗಳು ಸಾಕಷ್ಟು ಗೋಚರಿಸುತ್ತಿವೆ. ಮೂಲಭೂತ ಸೌಕರ್ಯದ ವಿಷಯದಲ್ಲಿ ಮಾತ್ರವಲ್ಲ, ಶಿಕ್ಷಣದ ಗುಣಮಟ್ಟವನ್ನು ಸಹ ಸುಧಾರಿಸಲಾಗುತ್ತಿದೆ.
ಸರ್ಕಾರಿ ಶಾಲೆಗಳ 12ನೇ ತರಗತಿಯ ವಿದ್ಯಾರ್ಥಿಗಳು ಶ್ಲಾಘನೀಯ ಸಾಧನೆಯನ್ನು ಸಾಧಿಸಲು ಕಾರಣವಾಯಿತು. ಈ ವರ್ಷದ ಉತ್ತಿರ್ಣ ಶೇ. 90.64 ವಾಗಿದ್ದು, ಕಳೆದ ವರ್ಷಕ್ಕಿಂತ 2.37% ಹೆಚ್ಚು ಮತ್ತು ರಾಷ್ಟ್ರೀಯ ಸಿ.ಬಿ.ಎಸ್.ಇ. ಸರಾಸರಿಗಿಂತ 7.6% ಹೆಚ್ಚು.
ದೆಹಲಿ ಸರ್ಕಾರ ಪರಿಚಯಿಸಿದ ಹಲವಾರು ಯೋಜನೆಗಳು ಶಿಕ್ಷಣದ ಗುಣಮಟ್ಟದಲ್ಲಿ ಹೆಚ್ಚಿನ ಸುಧಾರಣೆಗೆ ಮೂಲ. ಕಳೆದ ವರ್ಷ, 3ನೇ ತರಗತಿಯಿಂದ 9ನೇ ತರಗತಿಗಳ ಕೇವಲ 48%ರಷ್ಟು ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಓದಲು ಸಮರ್ಥರಾಗಿದ್ದರು. ಈ ವರ್ಷ ಸರ್ಕಾರ ಏಪ್ರಿಲ್ ತಿಂಗಳಲ್ಲಿ 'ಮಿಷನ್ ಬುನಿಯಾದ್' ಪ್ರಾರಂಭಿಸಿದ ನಂತರ, ಯೋಜನೆಯಡಿ ಇದ್ದ 63% ವಿದ್ಯಾರ್ಥಿಗಳು ಓದಲು ಶಕ್ತರಾಗಿದ್ದಾರೆ.
ಮೆಗಾ ಪಿ.ಟಿ.ಎಂ. (ಪೋಷಕ-ಶಿಕ್ಷಕರ ಸಭೆ)
ಮೆಗಾ ಪಿ.ಟಿ.ಎಂ. (ಪೋಷಕ-ಶಿಕ್ಷಕರ ಸಭೆ) |
ಪರಿಣಾಮಕಾರಿಯಾಗಿ ಪೋಷಕ-ಶಿಕ್ಷಕರ ಪಾಲುದಾರಿಕೆಗಳ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನದಲ್ಲಿ, ದೆಹಲಿ ಸರ್ಕಾರವು ಮೆಗಾ ಪೋಷಕ-ಶಿಕ್ಷಕರ ಸಭೆಗಳನ್ನು (ಪಿ.ಟಿ.ಎಂ.) ನಡೆಸುತ್ತಿದೆ. ಪೂರ್ವಭಾವಿ ಪರೀಕ್ಷಾ ಪೋಷಕ-ಶಿಕ್ಷಕರ ಸಭೆಗಳನ್ನು ಈ ವರ್ಷದ ಆರಂಭದಲ್ಲಿ ಸರ್ಕಾರಿ ಶಾಲೆಗಳಲ್ಲಿ ನಡೆಸಲಾಯಿತು. ಉಪ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯ ಅವರು ನಗರದ ಅನೇಕ ಭಾಗಗಳ ಶಾಲೆಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿದರು.
ಶೈಕ್ಷಣಿಕ ಮಾತ್ರವಲ್ಲದೆ, ವಿದ್ಯಾರ್ಥಿಗಳ ಒಟ್ಟಾರೆ ಯೋಗ-ಕ್ಷೇಮಕ್ಕೆ ದೆಹಲಿ ಸರ್ಕಾರವು ಪ್ರಾಮುಖ್ಯತೆಯನ್ನು ನೀಡುತ್ತಿದೆ. ಕೇವಲ ಅಂಕಗಳು ಒಬ್ಬ ವ್ಯಕ್ತಿಯ ಯಶಸ್ಸನ್ನು ಮಾಪನ ಮಾನದಂಡವಾಗಬಾರದೆನ್ನುವ ಉದ್ದೇಶಕ್ಕೆ, ವಿಶೇಷ 'ಸಂತೋಷ ಪಠ್ಯಕ್ರಮ'ವನ್ನು ಪರಿಚಯಿಸಲಾಗಿದೆ. ಈ ಪಠ್ಯಕ್ರಮವು ನರ್ಸರಿಯಿಂದ 8ನೇ ತರಗತಿಯಲ್ಲಿರುವ ಸುಮಾರು 8 ಲಕ್ಷ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ. ಈ ಪಠ್ಯಕ್ರಮವು 45 ನಿಮಿಷಗಳ 'ಸಂತೋಷದ ಅವಧಿ'ಯನ್ನು ಮತ್ತು ಪ್ರತಿ ತರಗತಿ ಆರಂಭವಾಗುವ ಮೊದಲು 5 ನಿಮಿಷಗಳ ಕಾಲ ಧ್ಯಾನ ಮಾಡಿಲಾಗುತ್ತದೆ.
ಇದಲ್ಲದೆ, ದೆಹಲಿ ಸರ್ಕಾರವು ಪ್ರಾರಂಭಿಸಿದ ಹಲವಾರು ಯೋಜನೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸ್ಥಾಪನೆ, ಬಾಲಕಿಯರಿಗೆ ಸ್ವರಕ್ಷಣೆ ಮತ್ತು 'ಸ್ಪೋಕನ್ ಇಂಗ್ಲಿಷ್' ತರಗತಿಗಳು.
ಕಳೆದ ವರ್ಷದಲ್ಲೆ, ಖಾಸಗಿ ಶಾಲೆಗಳಿಂದ ಸುಮಾರು 900 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಸೇರಿದ್ದಾರೆ. ಅದಲ್ಲದೆ, ಇಬ್ಬರು ಎಎಪಿ ಶಾಸಕರು ಇಂತಹ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಿಕೊಂಡಿದ್ದಾರೆ. ಈ ಶಾಲೆಗಳು ಇದೇ ರೀತಿಯಾಗಿ ಮುಂದುವರೆದರೆ, ಇತರ ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿಕೊಂಡರೆ ಅದು ನಿಜವಾಗಿಯೂ ಆಶ್ಚರ್ಯಯೆನಿಸುದಿಲ್ಲ.
ಉತ್ತರ ಪ್ರದೇಶದಂತಹ ರಾಜ್ಯಗಳು ತನ್ನ ವಿದ್ಯಾರ್ಥಿಗಳಿಗೆ ಕಡ್ಡಾಯವಾದ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಅರ್ಧದಷ್ಟು ಶೈಕ್ಷಣಿಕ ಅವಧಿ ಮುಗಿದರೂ, ಇನ್ನೂ ಒದಗಿಸದಿದ್ದಾಗ ದೆಹಲಿಯ ಸರ್ಕಾರಿ ಶಾಲೆಗಳು ಈ ನಿಟ್ಟಿನಲ್ಲಿ ದಾರಿ ತೋರಿಸುತ್ತಿದೆ. ಒಳ್ಳೆಯ ಮತ್ತು ಸಮಗ್ರ ಶಿಕ್ಷಣವು ಪ್ರತಿ ಮಗುವಿನ ಹಕ್ಕು ಮತ್ತು ಅದನ್ನು ಒದಗಿಸುವಲ್ಲಿ ದೆಹಲಿ ಪ್ರಕಾಶಮಾನವಾದ ಉದಾಹರಣೆಯಾಗಿದೆ. ಶೈಕ್ಷಣಿಕ ಕೇಂದ್ರವಾಗಿ ರೂಪಾಂತರಗೊಳ್ಳಲು ದೆಹಲಿ ಸರ್ಕಾರದ ಮಹತ್ವಾಕಾಂಕ್ಷೆ ಇದೀಗ ದೂರದ ಕನಸಿನಂತೆ ಕಾಣುತ್ತಿಲ್ಲ, ಈ ನಿರಂತರ ಪ್ರಯತ್ನಗಳಿಂದ ಸಾಧ್ಯ. ರಾಷ್ಟ್ರೀಯ ರಾಜಧಾನಿ ಈಗ ಆದ್ಯತೆಗಳನ್ನು ಹೇಗೆ ಹೊಂದಿಸಬೇಕು ಎಂಬುದಕ್ಕೆ ಉದಾಹರಣೆಯಾಗಿದೆ. ಇದನ್ನು ಇತರ ರಾಜ್ಯಗಳಿಂದ ನಿರೀಕ್ಷೆಸಬೇಕಿದೆ.
ಉತ್ತರ ಪ್ರದೇಶದಂತಹ ರಾಜ್ಯಗಳು ತನ್ನ ವಿದ್ಯಾರ್ಥಿಗಳಿಗೆ ಕಡ್ಡಾಯವಾದ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಅರ್ಧದಷ್ಟು ಶೈಕ್ಷಣಿಕ ಅವಧಿ ಮುಗಿದರೂ, ಇನ್ನೂ ಒದಗಿಸದಿದ್ದಾಗ ದೆಹಲಿಯ ಸರ್ಕಾರಿ ಶಾಲೆಗಳು ಈ ನಿಟ್ಟಿನಲ್ಲಿ ದಾರಿ ತೋರಿಸುತ್ತಿದೆ. ಒಳ್ಳೆಯ ಮತ್ತು ಸಮಗ್ರ ಶಿಕ್ಷಣವು ಪ್ರತಿ ಮಗುವಿನ ಹಕ್ಕು ಮತ್ತು ಅದನ್ನು ಒದಗಿಸುವಲ್ಲಿ ದೆಹಲಿ ಪ್ರಕಾಶಮಾನವಾದ ಉದಾಹರಣೆಯಾಗಿದೆ. ಶೈಕ್ಷಣಿಕ ಕೇಂದ್ರವಾಗಿ ರೂಪಾಂತರಗೊಳ್ಳಲು ದೆಹಲಿ ಸರ್ಕಾರದ ಮಹತ್ವಾಕಾಂಕ್ಷೆ ಇದೀಗ ದೂರದ ಕನಸಿನಂತೆ ಕಾಣುತ್ತಿಲ್ಲ, ಈ ನಿರಂತರ ಪ್ರಯತ್ನಗಳಿಂದ ಸಾಧ್ಯ. ರಾಷ್ಟ್ರೀಯ ರಾಜಧಾನಿ ಈಗ ಆದ್ಯತೆಗಳನ್ನು ಹೇಗೆ ಹೊಂದಿಸಬೇಕು ಎಂಬುದಕ್ಕೆ ಉದಾಹರಣೆಯಾಗಿದೆ. ಇದನ್ನು ಇತರ ರಾಜ್ಯಗಳಿಂದ ನಿರೀಕ್ಷೆಸಬೇಕಿದೆ.