ವಿಷಯಕ್ಕೆ ಹೋಗಿ

ಖಾಸಗಿ ಆಸ್ಪತ್ರೆಗಳು 20% ಹಾಸಿಗೆಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡಬೇಕು: ಅರವಿಂದ್ ಕೇಜ್ರಿವಾಲ್

ದೆಹಲಿಯ ಖಾಸಗಿ ಆಸ್ಪತ್ರೆಗಳು ತಮ್ಮ 20% ಹಾಸಿಗೆಗಳನ್ನು ಕೊರೊನಾ ವೈರಸ್‌ ರೋಗಿಗಳಿಗೆ ಮೀಸಲಿಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ.


ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ದೆಹಲಿಯಲ್ಲಿ ಒಟ್ಟು 117 ಖಾಸಗಿ ಆಸ್ಪತ್ರೆಗಳಿವೆ. ಅವುಗಳಲ್ಲಿನ ಹಾಸಿಗೆಗಳಲ್ಲಿ ಕರೋನವೈರಸ್ ರೋಗಿಗಳಿಗೆ ಶೇ 20 ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಲು ತಿಳಿಸಲಾಗಿದೆ ಎಂದಿದ್ದಾರೆ.
“ಕೋವಿಡ್-19 ಚಿಕಿತ್ಸೆಗೆ ಹೋಗುವವರಿಗೆ ಇಂದಿನಿಂದ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ 2,000 ಹೊಸ ಹಾಸಿಗೆಗಳು ಲಭ್ಯವಿರುತ್ತವೆ” ಅವುಗಳನ್ನು ಬಳಸಬಹುದು ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.
ಲಾಕ್‌ಡೌನ್‌ನಲ್ಲಿನ ಸಡಿಲತೆ ಕಾರಣ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿವೆ. ಆದರೆ ಮರಣ ಪ್ರಮಾಣ ಅಥವಾ ಗಂಭೀರ ಪ್ರಕರಣಗಳ ಸಂಖ್ಯೆ ವೇಗವಾಗಿ ಏರಿಕೆಯಾಗದಿದ್ದರೆ ಚಿಂತೆ ಇಲ್ಲ. ಜನರು ವೈರಸ್‌ಗೆ ತುತ್ತಾಗಿ ಚೇತರಿಸಿಕೊಂಡರೆ, ಚಿಂತೆ ಮಾಡಲು ಏನೂ ಇಲ್ಲ ಅವರು ತಿಳಿಸಿದ್ದಾರೆ.
ಕೋವಿಡ್-19 ಪ್ರಕರಣಗಳು ನಿಧಾನವಾಗಿ ಹೆಚ್ಚುತ್ತಿವೆ ಎಂದು ನಾನು ಒಪ್ಪಿಕೊಂಡರೂ ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹೆಚ್ಚಿನ ಪ್ರಕರಣಗಳಲ್ಲಿ ಸೌಮ್ಯ ಲಕ್ಷಣಗಳಿವೆ ಅಥವಾ ಲಕ್ಷಣರಹಿತವಾಗಿದೆ. ಹಾಗಾಗಿ ಅಂತವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಕಾಮೆಂಟ್‌ಗಳು

ನೆಚ್ಚಿನ ಪೋಸ್ಟ್