ಕೊರೊನಾ ವೈರಸ್ ಸೋಂಕಿತ ರೋಗಿಗಳ ಚಿಕಿತ್ಸೆಗೆ ಸಹಾಯಕವಾಗಲು ದೆಹಲಿ ಸರ್ಕಾರ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಿದೆ. ದೇಶದಲ್ಲಿಯೇ ಮೊದಲು ಇಂತಹ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಕೋವಿಡ್ - 19 ಸೋಂಕಿನಿಂದ ಗುಣಮುಖರಾದವರು ಪ್ಲಾಸ್ಲಾ ದಾನ ಮಾಡಬಹುದು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು. "ಜನರು ಬೇರೆಯವರ ಜೀವ ಉಳಿಸಲು ಪ್ಲಾಸ್ಮಾ ಬ್ಯಾಂಕ್‌ಗೆ ಪ್ಲಾಸ್ಮಾ ದಾನ ಮಾಡಬೇಕು. ದೆಹಲಿ ಜನರು ಬೇರೆಯವರ ಜೀವ ಉಳಿಸಲು ಇದು ಉತ್ತಮ ಅವಕಾಶ" ಎಂದು ಹೇಳಿದರು.
"ಯಾವುದೇ ವ್ಯಕ್ತಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖವಾಗಿದ್ದರೆ ಮತ್ತು 14 ದಿನದ ಐಸೋಲೇಷನ್ ಪೂರ್ಣಗೊಳಿಸಿದ್ದರೆ ಇನ್ನೊಬ್ಬರ ಜೀವ ಉಳಿಸಲು ಪ್ಮಾಸ್ಲಾ ದಾನ ಮಾಡಬಹುದು. ಜನರು 1031 ನಂಬರ್‌ಗೆ ಕರೆ ಮಾಡಿ ಪ್ಲಾಸ್ಮಾ ದಾನ ಮಾಡುವ ಬಗ್ಗೆ ಮಾಹಿತಿ ನೀಡಬಹುದು" ಎಂದರು.
ಪ್ಮಾಸ್ಮಾ ದಾನ ಮಾಡಲು ಏನು ಮಾಡಬೇಕು?
"ಜನರು ಪ್ಲಾಸ್ಮಾ ದಾನ ಮಾಡಲು ಬಯಸಿದರೆ 1031 ನಂಬರ್‌ಗೆ ಕರೆ ಮಾಡಬಹುದು ಅಥವ 8800007722 ನಂಬರ್‌ಗೆ ವಾಟ್ಸಪ್ ಸಂದೇಶ ಕಳಿಸಬಹುದು. ಬಳಿಕ ವೈದ್ಯರು ಅವರನ್ನು ಸಂಪರ್ಕಿಸುತ್ತಾರೆ" ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.
ಯಾರು ಪ್ಲಾಸ್ಮಾ ದಾನ ಮಾಡಬಹುದು?
"ನೀವು ಕೋವಿಡ್ - 19 ಸೋಂಕಿನಿಂದ ಗುಣಮುಖರಾಗಿದ್ದು 18 ರಿಂದ 60 ವರ್ಷದವರಾಗಿದ್ದರೆ ಪ್ಲಾಸ್ಮಾ ದಾನ ಮಾಡಬಹುದು. ದಾನ ಮಾಡುವವರ ತೂಕ 50 ಕೆಜಿಗಿಂತ ಹೆಚ್ಚಿರಬೇಕು. ಮಗುವಿಗೆ ಜನ್ಮ ನೀಡಿರುವ ಮಹಿಳೆಯರು ಪ್ಲಾಸ್ಮಾ ದಾನ ಮಾಡುವಂತಿಲ್ಲ" ಎಂದು ಮುಖ್ಯಮಂತ್ರಿಗಳು ಹೇಳಿದರು.
ದೇಶದಲ್ಲಿಯೇ ಮೊದಲು
ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಿದ ಮೊದಲ ರಾಜ್ಯದ ದೆಹಲಿಯಾಗಿದೆ. ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಆಂಡ್ ಬಿಲಿಯರಿ ಸೈನ್ಸಸ್‌ನಲ್ಲಿ ಪ್ಲಾಸ್ಮಾ ಬ್ಯಾಂಕ್ ಇದೆ. ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು ತಾವಾಗಿಯೇ ಬಂದು ಪ್ಲಾಸ್ಮಾ ದಾನ ಮಾಡಬಹುದು. ಇದನ್ನು ಇತರ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತದೆ.
ವೈದ್ಯರು ಶಿಫಾರಸು ಮಾಡಬೇಕು
ಎಲ್ಲಾ ಕೋವಿಡ್ - 19 ಸೋಂಕಿತ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುವುದಿಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುವ ರೋಗಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ವೈದ್ಯರು ಶಿಫಾರಸು ಮಾಡಿದ ರೋಗಿಗೆ ಮಾತ್ರ ಈ ಚಿಕಿತ್ಸೆ ನೀಡಲಾಗುತ್ತದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ