ವಿಷಯಕ್ಕೆ ಹೋಗಿ

ಭಾರತಕ್ಕೆ ಅಗತ್ಯವಿರುವ ಬದಲಾವಣೆ

- ಅರವಿಂದ್ ಕೇಜ್ರಿವಾಲ್ 

ಉತ್ತಮ ಶಿಕ್ಷಿತ ನಾಗರಿಕರಿಲ್ಲದ ಯಾವುದೇ ಅಭಿವೃದ್ಧಿ ಹೊಂದಿದ ದೇಶವಿಲ್ಲ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಎಣಿಸಬೇಕೆಂದು ಭಾರತ ಬಯಸಿದರೆ ಎಲ್ಲಾ ನಾಗರಿಕರಿಗೆ ಉತ್ತಮ ಶಿಕ್ಷಣವನ್ನು ಒದಗಿಸುವುದು ಅವಶ್ಯಕ.

ಅಭಿವೃದ್ಧಿಯ ಬಗ್ಗೆ ಮಾತನಾಡುವುದು ಸುಲಭ. ಆದರೆ, ಇದು ವಾಸ್ತವವಾಗಿ ನಡೆಯಲು ಕಷ್ಟದ ಪ್ರಯತ್ಮಗಳನ್ನು ಮಾಡಬೇಕಾಗುತ್ತದೆ.

ಕಳೆದ ಮೂರು ವರ್ಷಗಳಲ್ಲಿ ದೆಹಲಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಸುಧಾರಣೆಗಳು ನಡೆದಿದೆ. ನಾವು ಅಧಿಕಾರ ವಹಿಸಿಕೊಂಡಾಗ, ಸರ್ಕಾರಿ ಶಾಲೆಗಳು ಕೆಟ್ಟ ಸ್ಥಿತಿಯಲ್ಲಿದ್ದವು. ಶೌಚಾಲಯಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅನೇಕ ಶಾಲೆಗಳಲ್ಲಿ ಸರಿಯಾದ ಕುಡಿಯುವ ನೀರಿನ ಸೌಲಭ್ಯಗಳಿರಲಿಲ್ಲ. ಪೀಠೋಪಕರಣಗಳು ಮುರಿಯಲ್ಪಟ್ಟಿದ್ದವು. ಬ್ಲ್ಯಾಕ್ ಬೋರ್ಡ್ ಗಳು ಹಳೆಯದಾಗಿದ್ದವು. ಯಾವುದೇ ಶುಚಿತ್ವ ಇಲ್ಲದಿರುವುದು. ಕಟ್ಟಡಗಳು ಹಾಳು ಬಿದ್ದಿರುವುದು. ಅನೇಕ ತರಗತಿಗಳಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು. ಸಂಕ್ಷಿಪ್ತವಾಗಿ, ಸರ್ಕಾರಿ ಶಾಲೆಗಳು ಅತೀ ಕತ್ತಲೆ ಕವಿದ ಸ್ಥಿತಿಯಲ್ಲಿತ್ತು. 

ನಾವು ಅಧಿಕಾರ ವಹಿಸಿಕೊಂಡ ತಕ್ಷಣ, ನಾವು 500 ಕೋಟಿ ರೂ.ಗಳಿಂದ 1,000 ಕೋಟಿ ರೂ.ಗೆ ಶಿಕ್ಷಣದ ವೆಚ್ಚವನ್ನು ದ್ವಿಗುಣಗೊಳಿಸಿದ್ದೇವೆ. ನಾವು ಮೊದಲು ಮೂಲಸೌಕರ್ಯದ ಕೊರತೆಯನ್ನು ನಿಭಾಯಿಸಿದ್ದೇವೆ. ಶುಚಿತ್ವ, ಭದ್ರತೆ, ಶೌಚಾಲಯಗಳು ಮತ್ತು ಕುಡಿಯುವ ನೀರು - ಈ ನಾಲ್ಕು ಪ್ರಮುಖ ಅಂಶಗಳನ್ನು ಉದ್ದೇಶಿಸಲಾಯಿತು. 

ಅದೇ ಸಮಯದಲ್ಲಿ, ಅಸ್ತಿತ್ವದಲ್ಲಿರುವ ಶಾಲೆಗಳಲ್ಲಿ 8,000 ಹೊಸ ತರಗತಿ ಕೊಠಡಿಗಳನ್ನು ಕಟ್ಟಲು ಆದೇಶ ನೀಡಲಾಯಿತು (ಈ ವರ್ಷಕ್ಕೆ 10,000 ಕೊಠಡಿಗಳನ್ನು ಕಟ್ಟಲು ಆದೇಶಿಸಲಾಗಿದೆ). ಅನೇಕ ಶಾಲೆಗಳ ಬ್ಲ್ಯಾಕ್ ಬೋರ್ಡ್ ಗಳನ್ನು ದುಬಾರಿ ಹಸಿರು ಅಥವಾ ಬಿಳಿ ಬೋರ್ಡ್ ಗೆ ಬದಲಾಯಿಸಲಾಗಯಿತು. ಎಲ್ಲಾ ಶಾಲೆಗಳಿಗೆ ಬಣ್ಣ ಬಳಿಸಲಾಯಿತು.





ಹಾಳು ಬಿದ್ದಿರುವ ಕಟ್ಟಡಗಳನ್ನು ದುರಸ್ತಿಗೊಳಿಸಲ್ಪಟ್ಟಿವೆ ಅಥವಾ ನೆಲಸಮಗೊಂಡು ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಹಂತಗಳು ಒಟ್ಟಿಗೆ ಶಾಲೆಗಳಲ್ಲಿ ಒಂದು ಹೊಂದಾಣಿಕೆಯ ವಾತಾವರಣ ಸೃಷ್ಟಿಸಿದೆ, ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯಂತೆ ಭಾವಿಸಿದರೆ, ಶಿಕ್ಷಕರಿಗೆ ಬೋಧನೆಯಂತೆ ಭಾವಿಸುತ್ತಿದೆ. 

ಮೂಲಸೌಕರ್ಯ ಒದಗಿಸಲು ಸುಲಭ. ಇದಕ್ಕೆ ಕೇವಲ ರಾಜಕೀಯ ಇಚ್ಛೆ ಮತ್ತು ಹಣದ ಅಗತ್ಯವಿದೆ. ಅತ್ಯಂತ ಸಂಕೀರ್ಣವಾದ ಪ್ರಶ್ನೆಯೆಂದರೆ - 55,000 ಬಲಶಾಲಿ ಉದ್ಯೋಗಿಗಳಾದ ಶಿಕ್ಷಕರ, ಪ್ರಾಂಶುಪಾಲಕರ, ಅಧಿಕಾರಿಗಳ ಮತ್ತು ಸಿಬ್ಬಂದಿಗಳ ನೈತಿಕತೆಯನ್ನು ಹೇಗೆ ಮೇಲೆತ್ತುವಿರಿ? ಇಲ್ಲಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯ ಮತ್ತು ಅವರ ಸಲಹೆಗಾರ್ತಿ ಅತೀಶಿ ಮಾರ್ಲೆನಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. 

ಅವರ ಜೊತೆ ನಿರಂತರವಾಗಿ ತೊಡಗಿಸಿಕೊಳ್ಳುತ್ತಾ, ಅವರ ಮಾತುಗಳನ್ನು ಕೇಳಿಸುತ್ತಾ, ಅವರ ಸಮಸ್ಯೆಗಳ ಬಗ್ಗೆ ಸಹಾನುಭೂತಿ ತೋರಿಸಿ ಅವುಗಳನ್ನು ಬಗೆಹರಿಸುವ ಮೂಲಕ ಸಿಬ್ಬಂದಿಗಳ ವಿಶ್ವಾಸವನ್ನು ಇವರು ಗೆದ್ದುಕೊಂಡರು. ಶಿಕ್ಷಕರು ಮತ್ತು ಪ್ರಾಂಶುಪಾಲಕರು ಮುಖ್ಯವಾಗಿ ಮತ್ತು ಗೌರವಾನ್ವಿತವಾಗಿ ಪರಿಗಣಿಸಲಾಯಿತು. ತರಬೇತಿಗಾಗಿ ವಿದೇಶದಲ್ಲಿರುವ ಕೇಂಬ್ರಿಡ್ಜ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾನಿಲಯಗಳಿಗೆ ಕಳುಹಿಸಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ, ತರಬೇತಿಗಾಗಿ ಸರ್ಕಾರಿ ಶಾಲೆಗಳ ಪ್ರಾಂಶುಪಾಲರನ್ನು ವಿದೇಶಕ್ಕೆ, ಶಿಕ್ಷಕರನ್ನು ಐಐಎಂಗಳಿಗೆ ಕಳುಹಿಸಲಾತ್ತಿದೆ. ಇವರು ಹೆಚ್ಚು ಚೈತನ್ಯದಿಂದ ಮತ್ತು ಉತ್ಸಾಹದಿಂದ ಮರಳುತ್ತಿದ್ದರೆ. 

ಇದು ಕೇವಲ ಮೂರು ವರ್ಷಗಳಲ್ಲಿ ಮಾತ್ರ. ಫಲಿತಾಂಶಗಳು ಇಲ್ಲಿಯವರೆಗೆ ಸಾಕಷ್ಟು ಷ್ರೋತ್ಸಾಹಿಸುತ್ತಿವೆ. ಕೇವಲ ಶಾಲೆಗಳ ಭೌತಿಕ ವಾತವರಣ ಸುಧಾಹರಣೆಯಾಗಿಲ್ಲ, ಷರೀಕ್ಷೆಯ ಪಲಿತಾಂಶಗಳು ಕೂಡ ಸುಧಾರಣೆ ತೋರಿಸಿದೆ. ಮತ್ತೆ ಮೊದಲ ಬಾರಿಗೆ, ದೆಹಲಿಯ ಸರ್ಕಾರಿ ಶಾಲೆಗಳ 12ನೇ ತರಗತಿಯ ಫಲಿತಾಂಶಗಳು ಕಳೆದ ಎರಡು ವರ್ಷಗಳಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 600ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಜೆಇಇ ಪರೀಕ್ಷೆಗೆ ಅರ್ಹರಾಗಿದ್ದಾರೆ.

ಮತ್ತೊಂದು ಮಹತ್ವದ ಉಪಕ್ರಮವನ್ನು ತೆಗೆದುಕೊಳ್ಳಲಾಯಿತು. ಶಾಲಾ ವ್ಯವಹಾರಗಳಲ್ಲಿ ಪೋಷಕರನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಾಯಿತು. ಮೊದಲ ಬಾರಿಗೆ, 2016ರಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪೋಷಕ-ಶಿಕ್ಷಕರ ಸಭೆಗಳು (ಪಿಟಿಎಂ) ಆಯೋಜಿಸಲ್ಪಟ್ಟವು. ಆನೇಕ ಪೋಷಕರು ಮೊದಲ ಬಾರಿಗೆ ಶಿಕ್ಷಕರನ್ನು ಭೇಟಿಯಾದರು. ಹಿಂದೆ ಬಡ ಜನರು ತಮ್ಮ ಮಕ್ಕಳ ಶಿಕ್ಷಣದಲ್ಲಿ ಆಸಕ್ತಿ ಹೊಂದಿಲ್ಲ ಎಂಬ ಆನೇಕ ಶಿಕ್ಷಕರ ಅಭಿಪ್ರಾಯವನ್ನು ಪಿಟಿಎಂಗಳು ಬದಲಾಯಿಸಿತು. ಈಗ ಪಿಟಿಎಂಗಳು ಶಾಲೆಗಳಲ್ಲಿ ಸಾಮಾನ್ಯ.

ಎಲ್ಲಾ ಶಾಲೆಗಳಲ್ಲಿ ಶಾಲಾ ನಿರ್ವಹಣಾ ಸಮಿತಿಗಳನ್ನು (ಎನ್. ಎಂ. ಸಿ.) ಸಹ ರಚಿಸಲಾಯಿತು. ಒಂದು ಸಮಿತಿಯಲ್ಲಿ ಪ್ರಾಂಶುಪಾಲಕ, ಕೆಲ ಶಿಕ್ಷಕರು ಮತ್ತು ಕೆಲ ಪೋಷಕರನ್ನು ಒಳಗೊಂಡಿದೆ. ಈ ಸಮಿತಿಗಳಿಗೆ ಅಧಿಕಾರ ಮತ್ತು ಕೆಲವು ಹಣಕಾಸು ನೀಡಲಾಗಿದೆ. ಈ ಪ್ರಯೋಗವನ್ನು ತುಂಬ ಯಶಸ್ವಿಯಾಗಿ ದೇಶದಲ್ಲಿ ಮೊದಲ ಬಾರಿಗೆ ಪ್ರಯತ್ನಿಸಲಾಗಿದೆ.

ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸಹ-ಅಸ್ತಿತ್ವದಲ್ಲಿ ನಾವು ನಂಬುತ್ತೇವೆ. ಖಾಸಗಿ ಶಾಲೆಗಳು ಎಲ್ಲಿಯವರೆಗೆ ಕಾನೂನುಗಳನ್ನು ಅನುಸರಿಸುತ್ತದೆ, ಅಲ್ಲಿಯವರೆಗೆ ಅವರ ಕಾರ್ಯ ಚಟುವಟಿಕೆಗಳಲ್ಲಿ ಸರ್ಕಾರ ಮದ್ಯ ಪ್ರವೇಶಿಸುವುದಿಲ್ಲ. ಕೆಲವು ಖಾಸಗಿ ಶಾಲೆಗಳ ಮೇಲೆ ಶುಲ್ಕ ಹೆಚ್ಚಿಸಿ ಸುಲಿಗೆಯ ದೂರುಗಳು ಇದ್ದವು. ಸರ್ಕಾರಿ ಭೂಮಿಯಲ್ಲಿರುವ ಆ ಶಾಲೆಗಳು ಸರ್ಕಾರಿ ಲೆಕ್ಕ ಪರಿಶೋಧನೆಯಾಗದೆ ತಮ್ಮ ಶುಲ್ಕವನ್ನು ಹೆಚ್ಚಿಸಲು ಅನುಮತಿಸಲಾಗಿಲ್ಲ.

ಇದರ ಪರಿಣಾಮವಾಗಿ, ಕಳೆದ ಮೂರು ವರ್ಪಗಳಲ್ಲಿ ಕೇವಲ 25 ಶಾಲೆಗಳಿಗೆ 10% ಶುಲ್ಕ ಹೆಚ್ಚಿಸಲು ಅವಕಾಶ ನೀಡಲಾಗಿದೆ. ಅಧಿಕ ಶುಲ್ಕವನ್ನು ಮರುಪಾವತಿಸಲು ಸುಮಾರು 600 ಶಾಲೆಗಳಿಗೆ ಆದೇಶಿಸಲಾಗಿದೆ. ಮತ್ತೊಮ್ಮೆ, ಭಾರತದಲ್ಲಿ ಮೊದಲ ಬಾರಿಗೆ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕವನ್ನು ಹಿಂದಿರುಗಿಸಿವೆ.

ದೆಹಲಿಯ ಶಿಕ್ಷಣ ಮಾದರಿಯ ಪ್ರಕಾರ, 12ನೇ ತರಗತಿಯವರೆಗೆ ಶಿಕ್ಷಣ ಉಚಿತ. ನಂತರ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ.ವರೆಗೆ ಸಾಲವನ್ನು ಒದಗಿಸಲು ಸರ್ಕಾರ ಒಂದು ಟ್ರಸ್ಟ್ ಸ್ಥಾಪಿಸಿದೆ‌. ಆರ್ಥಿಕ ದುರ್ಬಲ ವಿದ್ಯಾರ್ಥಿಗಳು ಮತ್ತು ಕಾಲೇಜು ಶಿಕ್ಷಣಕ್ಕೆ ತಮ್ಮ ಸ್ವಂತ ಹಣದನ್ನು ಬಯಸುವ ವಿದ್ಯಾರ್ಥಿಗಳು ಈ ಸಾಲವನ್ನು ಪಡೆಯಬಹುದು.

ಸಾಲ ಪಡೆಯಲು ತುಂಬ ಸುಲಭ. ನೀವು ಯಾವುದೇ ಮೇಲಾಧಾರವನ್ನು ನೀಡುವ ಅಗತ್ಯವಿಲ್ಲ. ಸರ್ಕಾರವು ಖಾತರಿದಾರಕನಾಗಿ ಕಾರ್ಯ ನಿರ್ವಹಿಸುತ್ತದೆ. ವಿದ್ಯಾರ್ಥಿ 15 ವರ್ಷಗಳಲ್ಲಿ ಸುಲಭ ಕಂತುಗಳಲ್ಲಿ ಅದನ್ನು ಮರುಪಾವತಿ ಮಾಡುತ್ತಾನೆ. ಪದವಿ ಮುಗಿದ ಒಂದು ವರ್ಷ ನಂತರ ಮರುಪಾವತಿ ಪ್ರಾರಂಭವಾಗುತ್ತದೆ.

12ನೇ ತರಗತಿಯ ನಂತರ ತಕ್ಷಣ ಕೆಲಸ ಬಯಸುವ ವಿದ್ಯಾರ್ಥಿಗಳಿಗಾಗಿ, ಸಿಂಗಾಪುರ ಸರ್ಕಾರದ ಸಹಯೋಗದೊಂದಿಗೆ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳು ಒಂದು ವರ್ಷದ ವೃತ್ತಿ ಶಿಕ್ಷಣ ಕೋರ್ಸ್ ಗಳನ್ನು ನೀಡುತ್ತವೆ. ಮೂರು ವರ್ಷಗಳ ಹಿಂದೆ ಸ್ಥಾಪಿಸಲಾದ ಮೊದಲ ಕೌಶಲ್ಯ ಕೇಂದ್ರವು ಎಲ್ಲಾ ಮೂರು ವರ್ಷಗಳಲ್ಲಿ 100% ಉದ್ಯೋಗಗಳನ್ನು ಒದಗಿಸುವ ಮೂಲಕ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ದೆಹಲಿಯಲ್ಲಿ ಇಂತಹ ಹಲವಾರು ಕೌಶಲ್ಯ ಕೇಂದ್ರಗಳನ್ನು ತೆರೆಯಲು ಸರ್ಕಾರವು ಯೋಜಿಸುತ್ತಿದೆ.

ನಮ್ಮ ಮಕ್ಕಳು ನಮ್ಮ ದೊಡ್ಡ ಆಸ್ತಿ. ಅವರು ನಮ್ಮ ದೇಶದ ಭವಿಷ್ಯ. ನಾವು ಅವರಿಗೆ ಉತ್ತಮ ಶಿಕ್ಷಣವನ್ನು ಒದಗಿಸಿದರೆ,ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದನ್ನು ಯಾರು ತಡೆಯಲಾಗದು.


(ಈ ಲೇಖನವನ್ನು 'ಟೈಮ್ಸ್ ಆಫ್ ಇಂಡಿಯಾ'ಯಿಂದ ಅನುವಾದಿಸಲಾಗಿದೆ)


ನೆಚ್ಚಿನ ಪೋಸ್ಟ್