ವಿಷಯಕ್ಕೆ ಹೋಗಿ

ಶಾಲಾ ನಿರ್ವಹಣಾ ಸಮಿತಿ - ದೆಹಲಿಯ ಶಾಲಾ ನಿರ್ಧಾರಗಳಲ್ಲಿ ಪೋಷಕರ ಪಾತ್ರ



ದೆಹಲಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣದ ಕ್ಷೇತ್ರದಲ್ಲಿ ಒಂದು ಕ್ರಾಂತಿ ನಡೆಯುತ್ತಿದೆ. ಸರ್ಕಾರಿ ಶಾಲೆಯನ್ನು ಇಲ್ಲಿಯವರೆಗೆ ನಿರ್ಲಕ್ಷ್ಯ ಮತ್ತು ಕಡೆಗಣಿಸಲಾಗಿತ್ತು, ಈಗ ಸರ್ಕಾರಿ ಶಾಲೆಗಳ ಪುನರುಜ್ಜೀವನವನ್ನು ಮಾಡಲಾಗುತ್ತಿದೆ, ಅದಕ್ಕೆ ಸಾಕ್ಷಿಯಾಗಿ ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಆಡಳಿತ ಮತ್ತು ಮೂಲಸೌಕರ್ಯಗಳನ್ನು , ದೆಹಲಿ ಸರ್ಕಾರವು ತೆಗೆದ ನಿರ್ಧಾರಗಳ ಮೂಲಕ ಎಲ್ಲವನ್ನೂ ಶಕ್ತಿಯುತಗೊಳಿಸಲಾಗುತ್ತಿದೆ ಮತ್ತು ಪುನಶ್ಚೇತನಗೊಳಿಸಲಾಗುತ್ತಿದೆ. ದೆಹಲಿ ಸರ್ಕಾರದ ಮಾಜಿ ಶಿಕ್ಷಣ ಸಲಹೆಗಾರ್ತಿ ಅತೀಶಿಯವರು ಹೇಳಿದ್ದಂತೆ, "ವಿಶ್ವದ ಇತಿಹಾಸದಲ್ಲಿ ಯಾವುದೇ ದೇಶವು ತನ್ನ ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡದೆ ಅಭಿವೃದ್ಧಿಗೊಂಡಿಲ್ಲ." 

ಎಲ್ಲಾ ಪಾಲುದಾರರು ಸರಿಯಾದ ಕೆಲಸ ಮಾಡಲಿದ್ದಾರೆ ಎಂಬ ಆಳವಾದ ನಂಬಿಕೆಯೇ ಈ ಸುಧಾರಣೆಯ ಒಂದು ರಹಸ್ಯ. ಉದಾಹರಣೆಗೆ, ಕಳೆದ ನಾಲ್ಕು ವರ್ಷಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಒಳಪಡುವ ಶಾಲಾ ನಿರ್ವಹಣಾ ಸಮಿತಿಗಳಿಗೆ (ಎಸ್.ಎಂ.ಸಿ.ಗಳು) ದೆಹಲಿ ಸರ್ಕಾರವು ಶಾಲೆಗಳ ಆಡಳಿತವನ್ನು ವಿಕೇಂದ್ರೀಕರಿಸಿದೆ. ಇದು ಸಾರ್ವಜನಿಕ ಶಾಲೆಗಳನ್ನು ನಿರ್ವಹಿಸಲು ಅಮೇರಿಕಾ ಅನುಸರಿಸಿದ ಆಡಳಿತ ಮಾದರಿಯಾಗಿದೆ.



ಶಾಲಾ ನಿರ್ವಹಣಾ ಸಮಿತಿ (ಎಸ್.ಎಂ.ಸಿ.) - ಶಾಲೆ ಮತ್ತು ಪೋಷಕರ ನಡುವಿನ ಸೇತುವೆ 

ಈ ಬದಲಾವಣೆಯ ಕ್ರಮದ ಮೂಲಕ ಶಾಲೆಯೊಳಗೆ ಅಪಾರ ಹೊಣೆಗಾರಿಕೆಯನ್ನು ತಂದಿದೆ, ಏಕೆಂದರೆ ಈಗ ಶಾಲಾ ಅಧಿಕಾರಿಗಳು  ಪೋಷಕರಿಗೆ ಉತ್ತರದಾಯಿ. ಎಸ್.ಎಂ.ಸಿ.ಗಳು ಈ ಶಾಲೆಗಳಿಗೆ ಹಾಜರಾಗಲು ಬರುವ ವಿದ್ಯಾರ್ಥಿಗಳ ಸಮುದಾಯ ಮತ್ತು ಶಾಲೆಯ ನಿರ್ವಹಣ ಮಂಡಳಿಯ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಶಾಲೆಗಳ ನಿರ್ವಹಣೆಯಲ್ಲಿ ಸಮುದಾಯನ್ನು ತೊಡಗಿಸಿಕೊಳ್ಳುವುದರಿಂದ ಮುಖ್ಯವಾಗಿ ವಿದ್ಯಾರ್ಥಿಗಳ, ಶಾಲೆಯ ನಿರ್ವಹಣೆಯ  ಮತ್ತು ಸ್ವತಃ ಸಮುದಾಯವನ್ನು ಅಭಿವೃದ್ಧಿಗೊಳಿಸುವಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ . 

ಈ ಎಸ್.ಎಂ.ಸಿ.ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಸಾಮಾಜಿಕ ಅಭಿವೃದ್ಧಿಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳೋಣ. 

ಪ್ರತಿಯೊಂದು ಎಸ್.ಎಂ.ಸಿ.ಯಲ್ಲಿ 12 ಚುನಾಯಿತ ವಿದ್ಯಾರ್ಥಿಗಳ ಪೋಷಕರು, ಶಾಲಾ ಮುಖ್ಯಸ್ಥರು, 1 ಶಿಕ್ಷಕ/ಶಿಕ್ಷಕಿ, 1 ಚುನಾಯಿತ ಪ್ರತಿನಿಧಿ ಮತ್ತು 1 ಸಾಮಾಜಿಕ ಕಾರ್ಯಕರ್ತ/ಕಾರ್ಯಕರ್ತೆ. 2015 ರಲ್ಲಿ, 16 ಲಕ್ಷ ಮಕ್ಕಳ ಅರ್ಹ ಪೋಷಕರಿಂದ ಮೊದಲ ಬಾರಿಗೆ ಪೋಷಕರು ಆಯ್ಕೆಯಾದರು. 12,000 ಪೋಷಕ ಸದಸ್ಯರ ಸ್ಥಾನವನ್ನು ದೆಹಲಿ ಸರ್ಕಾರ ನಡೆಸುತ್ತಿದ್ದ 1000 ಶಾಲೆಗಳಲ್ಲಿ ಸೇರಿಸಲಾಯಿತು. 

ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ಐಲ್ಯಾಂಡ್ಸ್ ಸಿವಿಲ್ ಸರ್ವೀಸ್ (ಡೈನಿಕ್ಸ್) ಅಧಿಕಾರಿಗಳ ಮತ್ತು ಸೂಪರಿಂಟೆಂಡೆಂಟ್ಸ್ ರನ್ನು ವೀಕ್ಷಕರಾಗಿ ದೆಹಲಿ ಸರ್ಕಾರದ ಶಿಕ್ಷಣ ಇಲಾಖೆ ನಿಯೋಜಿಸುವ ಮೂಲಕ ತಡೆರಹಿತ ಚುನಾವಣೆಯನ್ನು ನಡೆಸಿದೆ.



16 ಲಕ್ಷ ಮಕ್ಕಳ ಪೋಷಕರು ಮತ ಚಲಾಯಿಸುವಂತಾಯಿತು ಮತ್ತು ಆದ್ದರಿಂದ ಶಾಲೆ ನಡೆಸುವಲ್ಲಿ ತಮ್ಮ ಅಭಿಪ್ರಾಯವನ್ನು ಹೇಳುವಂತಾಯಿತು. ಶಾಲೆಯ ನಿರ್ವಹಣೆಯಲ್ಲಿ ಸಮುದಾಯದ ಈ ರೀತಿಯ ಬೃಹತ್ ಪಾಲ್ಗೊಳ್ಳುವಿಕೆಯಿಂದ ಸಮಾಜದ ಬದಲಾವಣೆಯ ಏಜೆಂಟ್ ಆಗಿ ಶಿಕ್ಷಣವು ಕಂಡುಬಂದಿದೆ ಎಂದು ತೋರುತ್ತದೆ. ಇಲ್ಲಿ ಧನಾತ್ಮಕ ಭರವಸೆಯ ಅರಿವಿನ ಜೊತೆಗೆ ಹೆಚ್ಚಿನ ಹೊಣೆಗಾರಿಕೆಯನ್ನು ಹೊಂದಿದೆ. ದೆಹಲಿ ಶಿಕ್ಷಣ ಮಂತ್ರಿ ಸಿಸೋಡಿಯಾ ಹೇಳುವಂತೆ, ಪೋಷಕರು ಶಾಲೆಗಳಲ್ಲಿ ಹೆಚ್ಚು ಪಾಲುದಾರರಾಗಿದ್ದಾರೆ ಮತ್ತು ಆದ್ದರಿಂದ ಶಾಲಾ ನಿರ್ಣಯ ಮಾಡುವಲ್ಲಿ ಮತ್ತು ಶಾಲಾ ಜವಾಬ್ದಾರಿಯಲ್ಲಿ ಅವರ ಪಾಲ್ಗೊಳ್ಳುವಿಕೆಯಿಂದ ಶಿಕ್ಷಣದ ಉತ್ತಮ ವ್ಯವಸ್ಥೆಯನ್ನು ತರಲಾಗುತ್ತದೆ.

ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಪೋಷಕರು ಮತ್ತು ಶಿಕ್ಷಕರ ನಡುವಿನ ಸಹಭಾಗಿತ್ವ ರೂಪಿಸಲು ಎಸ್.ಎಂ.ಸಿ.ಗಳು ಸಹಾಯ ಮಾಡಿದೆ ಮತ್ತು ಇದು ಶಾಲೆ ಕಾರ್ಯ ಮತ್ತು ಬೆಳವಣಿಗೆಯಲ್ಲಿ ಅಪೂರ್ವ ಬದಲಾವಣೆಯನ್ನು ತಂದಿದೆ. 

ಪ್ರತಿ ವರ್ಷ, ಪ್ರತಿ ಶಾಲೆಗೆ, ಪ್ರತಿ ಅವಧಿಗೆ 5 ಲಕ್ಷ ರೂ. ಹಣಕಾಸಿನ ನೆರವನ್ನು ನೀಡುವ ಮೂಲಕ ದೆಹಲಿ ಸರ್ಕಾರವು ಈ ಎಸ್ಎಂಸಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ. ಎಸ್ಎಂಸಿ ನಿರ್ಧರಿಸಿದಂತೆ ನಿರ್ವಹಣೆ ಮತ್ತು ಇತರ ಕಾರ್ಯಗಳನ್ನು ನಿರ್ವಹಿಸಲು ಎಸ್ಎಂಸಿ ಈ ಹಣವನ್ನು ಬಳಸಿಕೊಳ್ಳಬಹುದು. ನಿರ್ವಹಣೆಗಾಗಿ ಪ್ರತಿ ಅತಿ ಕಡಿಮೆ ವೆಚ್ಚದ ಅನುಮೋದನೆಗಾಗಿ ನಿರ್ದೇಶನಾಲಯಕ್ಕೆ ಅಲೆದಾಡುವಿಕೆಯನ್ನು ಮುಕ್ತವಾಗಿಸುತ್ತದೆ. ನಿಧಿಯನ್ನು ವಿಷಯ ತಜ್ಞರಿಗಾಗಿ, ಅತಿಥಿ ಶಿಕ್ಷಕರಿಗಾಗಿ ಮತ್ತು ಇತ್ಯಾದಿಗಳಿಗೆ ಅಗತ್ಯವಿದ್ದಾಗ ಹಾಗೂ ಬೇಕಾದಾಗ ಬಳಸಬಹುದು. ವೈದ್ಯಕೀಯ, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕಾನೂನಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವೃತ್ತಿಯ ಸಮಾಲೋಚನೆಗಳಿಗೆ ಸಿಬ್ಬಂದಿಗಳನ್ನು ಉತ್ತೇಜಿಸಲು ಮತ್ತು ಸಹಾಯ ಮಾಡಲು ಈ ನಿಧಿಯ ಬಳಕೆಯನ್ನು ಉಪಯೋಗಿಸಬಹುದು. ಹೀಗಾಗಿ, ಶಾಲೆಗಳಿಗೆ ನಿಧಿ ಹಂಚಿವಿಕೆಯ  ಮೂಲಕ ಶಾಲೆಗಳು ಸ್ವಾಯತ್ತತೆ ಮತ್ತು ಹೊಣೆಗಾರಿಕೆಯನ್ನು ಪಡೆದುಕೊಳ್ಳುತ್ತವೆ.



ಇಂತಹ ಧನಾತ್ಮಕ ಪರಿಣಾಮವನ್ನು ಹೊಂದಿರುವ ಬದಲಾವಣೆಯನ್ನು ನಿರ್ಲಕ್ಷಿಸಬಾರದು. ಸರ್ಕಾರ ಮತ್ತು ಸಮುದಾಯ ಎರಡೂ ಶಿಕ್ಷಣದಲ್ಲಿ ಸಂಪೂರ್ಣವಾಗಿ ಹೂಡಿಕೆ  ಮಾಡುವ ಜೊತೆಗೆ ಎಸ್ಎಂಸಿಗಳ ಸಬಲೀಕರಣ ಮತ್ತು ಸಕ್ರಿಯಗೊಳಿಸುವಿಕೆಯಿಂದ ಅಸಾಧಾರಣ ಫಲಿತಾಂಶಗಳನ್ನು ನೀಡುತ್ತಿದೆ ಮತ್ತು ಇದರಿಂದ ದೆಹಲಿ ಸರ್ಕಾರಿ ಶಾಲೆಗಳಿಗೆ ಉತ್ತಮ ಭವಿಷ್ಯ ರೂಪಿಸಲಾಗುತ್ತದೆ . 

ನೆಚ್ಚಿನ ಪೋಸ್ಟ್