ವಿಷಯಕ್ಕೆ ಹೋಗಿ

ನಂ 1 ಸ್ಥಾನದಲ್ಲಿ ದೆಹಲಿ ಸರ್ಕಾರಿ ಶಾಲೆ, ಭಾರತದ ಟಾಪ್ 10 ಶ್ರೇಯಾಂಕದಲ್ಲಿ ಇನ್ನೆರಡು ಸರ್ಕಾರಿ ಶಾಲೆ

ದೆಹಲಿಯ ಮೂರು ಶಾಲೆಗಳು ದೇಶದ ಉನ್ನತ 10 ಸರ್ಕಾರಿ ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಅದರಲ್ಲಿ ಒಂದು ಶಾಲೆ ಪ್ರಥಮ ಸ್ಥಾನ ಪಡೆದಿದೆ. 




ದ್ವಾರಕಾ ಸೆಕ್ಟರ್ 10ರ ರಾಜ್ಕಿಯಾ ಪ್ರತಿಭಾ ವಿಕಾಸ್ ವಿದ್ಯಾಲಯ (ಆರ್‌ಪಿವಿವಿ) ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಕಳೆದ ವಾರ ಎಜುಕೇಶನ್ ವರ್ಲ್ಡ್ ಎಂಬ ಶೈಕ್ಷಣಿಕ ಪೋರ್ಟಲ್ ‘ಇಂಡಿಯನ್ ಸ್ಕೂಲ್ ರ‍್ಯಾಂಕಿಂಗ್‌ 2019’ ಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಜುಕೇಶನ್ ವರ್ಲ್ಡ್ ಅನ್ನು ದೇಶಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಬಳಸುತ್ತಿದ್ದಾರೆ. 

ದ್ವಾರಕಾ ಸೆಕ್ಟರ್ 10ರ ರಾಜ್ಕಿಯಾ ಪ್ರತಿಭಾ ವಿಕಾಸ್ ವಿದ್ಯಾಲಯ (ಆರ್‌ಪಿವಿವಿ) ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದರೆ, ಆರ್‌ಪಿವಿವಿ ಲಜಪತ್ ನಗರ ಐದನೇ ಸ್ಥಾನಕ್ಕೆ ಏರಿದೆ. ಆರ್‌ಪಿವಿವಿ ರೋಹಿಣಿ ಏಳನೇ ಸ್ಥಾನ ಪಡೆದಿದೆ. 


ಇಂಡಿಯನ್ ಸ್ಕೂಲ್ ರ‍್ಯಾಂಕಿಂಗ್‌ 2019

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಮೂರೂ ಶಾಲೆಗಳ ಶಿಕ್ಷಕರ ಮತ್ತು ಪ್ರಾಂಶುಪಾಲರ ಶ್ರಮವನ್ನು ಅಭಿನಂದಿಸಿದರು ಮತ್ತು ತಮ್ಮ ಆಡಳಿತದಲ್ಲಿ ದೆಹಲಿ ಸರ್ಕಾರವು ಶಿಕ್ಷಣ ಮತ್ತು ಸರ್ಕಾರಿ ಶಾಲೆಯನ್ನು ಮೊದಲ ಆದ್ಯತೆಯನ್ನಾಗಿ ಮಾಡಿದೆ ಎಂದು ಹೇಳಿದರು.

ಕಾಮೆಂಟ್‌ಗಳು

ನೆಚ್ಚಿನ ಪೋಸ್ಟ್