ವಿಷಯಕ್ಕೆ ಹೋಗಿ

ಸಾರ್ವತ್ರಿಕ ಆರೋಗ್ಯ ಸೇವೆ: ಉಚಿತ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆ


ಶಿಕ್ಷಣ ಹಾಗೂ ಆರೋಗ್ಯ ಬಹಳ ಮುಖ್ಯ.  ಕ್ಷೇತ್ರದಲ್ಲಿ ದೆಹಲಿ ಸರಕಾರ ಮಾಡಿರುವ ಸಾಧನೆ ಮೆಚ್ಚುವಂತಹದ್ದುದೆಹಲಿ ಸರ್ಕಾರವು ಮೂರು ಹಂತದ ಆರೋಗ್ಯ ವ್ಯವಸ್ಥೆ ಮೂಲಕ ಉಚಿತ ಔಷಧಿಗಳನ್ನುಪರೀಕ್ಷೆಗಳನ್ನುಹಲವಾರು ಜೀವ ಉಳಿಸುವಂತಹ ಶಸ್ತ್ರಚಿಕಿತ್ಸೆಯ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ

ಮೂರು ಹಂತದ ಆರೋಗ್ಯ ವ್ಯವಸ್ಥೆಗಳು : ಮೊಹಲ್ಲಾ ಕ್ಲಿನಿಕ್ಸ್, ಪಾಲಿಕ್ಲಿನಿಕ್ಸ್ ಮತ್ತು ಆಸ್ಪತ್ರೆಗಳು


ಮೊಹಲ್ಲಾ ಕ್ಲಿನಿಕ್ಸ್ (ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್ಸ್ ) : 


ಮೊಹಲ್ಲಾ ಕ್ಲಿನಿಕ್ ಗಳು ನೆರೆಹೊರೆಯ ಚಿಕಿತ್ಸಾಲಯಗಳು. ಇದನ್ನು ದೆಹಲಿ ಸರಕಾರ ನಗರದ 160 ಸ್ಥಳಗಳಲ್ಲಿ ಸ್ಥಾಪಿಸಿ, ಉತ್ತಮ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ವೈದ್ಯಕೀಯ ತಪಾಸನೆ, ಔಷಧಿಗಳು, ಪರೀಕ್ಷೆಗಳು ಎಲ್ಲವು ಉಚಿತವಾಗಿದೆ. ಯಾವುದೇ ಮೊಹಲ್ಲಾ ಕ್ಲಿನಿಕ್ ಗಳಲ್ಲಿ ಉಚಿತವಾಗಿ 109 ಅಗತ್ಯ ಔಷಧಿಗಳು, 212 ರೋಗನಿರ್ಣಯದ ಪರೀಕ್ಷೆಗಳು ಲಭ್ಯವಿದೆ





ಈಗಾಗಲೇ 160 ಮೊಹಲ್ಲಾ ಕ್ಲಿನಿಕ್ ಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು 786 ಮೊಹಲ್ಲಾ ಕ್ಲಿನಿಕ್ ಗಳು ಶೀಘ್ರದಲ್ಲೇ ತೆರೆಯಲಿದೆ. ಇದು ನಡೆದುಹೋಗಬಹುದಾದ ದೂರದಲ್ಲಿ (ವಾಕಿಂಗ್ ಡಿಸ್ಟೆನ್ಸ್) ನಿರ್ಮಿಸಲಾಗಿದೆ. ಮುಂದಿನ ವರ್ಷದಲ್ಲಿ 10,000 ಮೊಹಲ್ಲಾ ಕ್ಲಿನಿಕ್ ಗಳನ್ನೂ ತೆರೆಯುವ ಗುರಿ ಸರಕಾರದ್ದಾಗಿದೆ. ಮೂಲಕ ವೈದ್ಯರು ಕಾಯಿಲೆಗಳ ಮೇಲೆ ಒಂದು ನಿಗಾ ಇಟ್ಟಿರುತ್ತಾರೆ. ರೋಗ ತಡೆಗಟ್ಟಲು ಹಾಗೂ ಮೂಲ ಆರೈಕೆಗೆ ಇದು ತೆರೆಯಲಾಗಿದೆಇಲ್ಲಿ ರೋಗಿಯ ಡಿಜಿಟಲ್ ದಾಖಲೆಗಳನ್ನು ಇಟ್ಟುಕೊಂಡಿರುತ್ತದೆ. ವಿಶೇಷ ಆರೈಕೆಗೆ ಅಥವಾ ಪ್ರಮುಖ ಅನಾರೋಗ್ಯಕ್ಕಾಗಿ ಪಾಲಿಕ್ಲಿನಿಕ್ ಗೆ ಅಥವಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆಮಕ್ಕಳಿಗೋಸ್ಕರ ಶಾಲೆಯಲ್ಲಿ ಮತ್ತು ಮನೆಯಿಲ್ಲದವರಿಗಾಗಿ ರಾತ್ರಿ ಆಶ್ರಯದೊಟ್ಟಿಗೆ ತೆರೆಯಲಾಗಿದೆ. ಒಂದು ಮೊಹಲ್ಲಾ ಕ್ಲಿನಿಕ್ ಸ್ಥಾಪಿಸಲು ಕೇವಲ 20 ಲಕ್ಷ ಖರ್ಚು. ಕ್ಲಿನಿಕ್ ಸಂಪೂರ್ಣ ಹವಾನಿಯಂತ್ರಿತಇಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು  ಚಿಕಿತ್ಸೆಗೆ ಬರುತ್ತಾರೆ. 2017 ಆಗಸ್ಟ್ ರವರೆಗೆ 45 ಲಕ್ಷ ಚಿಕಿತ್ಸೆಗಳನ್ನು  ಯಶಸ್ವಿಯಾಗಿ ಮಾಡಲಾಗಿದೆ.  


ಪಾಲಿಕ್ಲಿನಿಕ್ಸ್ (ಆಮ್ ಆದ್ಮಿ ಪಾಲಿಕ್ಲಿನಿಕ್ಸ್) :


ದೆಹಲಿಯಲ್ಲಿ 3 ಹಂತದ ಸಾರ್ವತ್ರಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಲು, ದೆಹಲಿ ಸರಕಾರ 26 ಪಾಲಿಕ್ಲಿನಿಕ್ ಗಳನ್ನು ಪ್ರಾರಂಭಿಸಿದೆ. ಇತ್ತೀಚಿಗೆ 94 ಪಾಲಿಕ್ಲಿನಿಕ್ ಗಳು ಮಂಜೂರುಗೊಂಡಿದೆ. ಇದು ರೋಗಿಗಳಿಗೆ ವಿಶೇಷ ರೋಗನಿರ್ಣಯ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆಯನ್ನು ಒದಗಿಸುವ ಮೂಲಕ ಕಿಕ್ಕಿರಿದ ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ತಡೆಗಟ್ಟುತ್ತದೆ. ಅದಲ್ಲದೆ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಗಳ ಹೊರೆಯನ್ನು ಕಡಿತಗೊಳಿಸುತ್ತದೆ ಮತ್ತು ಗುಣಮಟ್ಟದ ಒಳರೋಗಿಗಳ ಆರೈಕೆಯ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆಒಂದು ವಾರದ ನಿರ್ದಿಷ್ಟ ದಿನಗಳಲ್ಲಿ ವಿಶೇಷ ತಜ್ಞ ವೈದ್ಯರು ಲಭ್ಯವಿರುತ್ತಾರೆ. ಉದಾಹರಣೆಗೆ ಸ್ತ್ರೀ ರೋಗ ತಜ್ಞ, ಮೂಳೆ ಚಿಕಿತ್ಸಕ, ಮಕ್ಕಳ ವೈದ್ಯ ಇತ್ಯಾದಿ. ಮೂಲ ಸ್ಕ್ಯಾನಿಂಗ್ ಗಳಾದ ಅಲ್ಟ್ರಾ ಸೌಂಡ್, ಎಕ್ಸ್ ರೇ, ಹೆಚ್ಚುವರಿ ರಕ್ತ ಪರೀಕ್ಷೆಗಳು ಇಲ್ಲಿ ಮಾಡಬಹುದು. ಯಾವುದೇ ಬಳಕೆ ಶುಲ್ಕವಿಲ್ಲದೆ ಎಲ್ಲಾ ಔಷಧಿಗಳು, ಸ್ಕ್ಯಾನಿಂಗ್ ಗಳು ಉಚಿತವಾಗಿದೆ






ದೆಹಲಿ ಸರಕಾರಿ ಆಸ್ಪತ್ರೆ


ದೆಹಲಿ ಸರಕಾರ ನಗರದಾದ್ಯಂತ 38 ಪೂರ್ಣಪ್ರಮಾಣದ ಆಸ್ಪತ್ರೆಯನ್ನು ನಡೆಸುತ್ತಿದೆ. ಕಳೆದ ಎರಡು ವರ್ಷಗಳಿಂದ, ದೆಹಲಿ ಸರಕಾರ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸಿದೆ. ಇದರ ಫಲಿತಾಂಶವಾಗಿ ಅಗಾಧ ಸಕರಾತ್ಮಕ ಪ್ರತಿಕ್ರಿಯೆ ದೊರಕುತ್ತಿದೆ. ಈಗಾಗಲೇ ಎಲ್ಲಾ ಔಷಧಿಗಳು, ಪರೀಕ್ಷೆಗಳು ಮತ್ತು ಶಸ್ತ್ರ ಚಿಕಿತ್ಸೆಗಳನ್ನು ಇಂತಹ ಆಸ್ಪತ್ರೆಗಳಲ್ಲಿ ಸಂಪೂರ್ಣವಾಗಿ ಉಚಿತಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ಸಿಟಿ ಸ್ಕ್ಯಾನ್ ಗಳು, ಎಂ.ಆರ್.. ಗಳಂತಹ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸುಮಾರು 3,000 ಹಾಸಿಗೆಗಳು ಹೆಚ್ಚಿಸಲಾಗಿದೆ ಮತ್ತು ಮೂಲ ಸೌಕರ್ಯಗಳು ನೀಡಲಾಗಿದೆ


ಸ್ಕ್ಯಾನ್ ಗಳು ಮತ್ತು ಶಸ್ತ್ರ ಚಿಕಿತ್ಸೆಗಳು :


ವೈದ್ಯರು ಸ್ಕ್ಯಾನಿಗೆ ಸೂಚಿಸಿದಾಗ, ನಿಗದಿತ ಸಮಯದ ಚೌಕಟ್ಟಿನಲ್ಲಿ ಸ್ಕ್ಯಾನ್ ಸರಕಾರಿ ಪರೀಕ್ಷಾ ಪ್ರಯೋಗಾಲಯ ಲಭ್ಯವಿಲ್ಲದಿದ್ದರೆ, ರೋಗಿ ಖಾಸಗಿ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರದ ಖರ್ಚಿನಲ್ಲಿ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಅದೇ ರೀತಿ, ವೈದ್ಯರು ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಿದಾಗ ಸರಕಾರಿ ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ದಿನ ಕಾಯುವ ಪರಿಸ್ಥಿತಿ ಇದ್ದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸರಕಾರದ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಎಲ್ಲಾ ನೀತಿ ದೆಹಲಿ ನಿವಾಸಿಗಳಿಗೆ ಅನ್ವಯಿಸುತ್ತದೆ ಹಾಗೂ ಇದಕ್ಕೆ ಯಾವುದೇ ಆದಾಯ ಪ್ರಮಾಣಪತ್ರದ ಅಗತ್ಯವಿಲ್ಲ



ಅಪಘಾತದ ಗಾಯಾಳುಗಳಿಗೆ 'ಉಚಿತ ಚಿಕಿತ್ಸೆ' : 


ಅಪಘಾತದ ನಂತರ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಬದುಕಿಸುವುದೇ ಮುಖ್ಯಸಮಯ ವ್ಯರ್ಥಮಾಡುವ ಯಾವುದೇ ಕಾರಣಕೊಡದೆ ಚಿಕಿತ್ಸೆ ನೀಡಬೇಕೆಂಬ ಉದ್ದೇಶದಿಂದ  ಕೆಲವು ನೀತಿಗಳನ್ನು ಸರಕಾರ ಜಾರಿಗೊಳಿಸಿದೆ

ಅಪಘಾತಗೊಳಗಾದವರನ್ನು ಯಾವುದಾದರು ಹತ್ತಿರದ ಆಸ್ಪತ್ರೆಗೆ ಯಾರಾದರೂ ತೆಗೆದುಕೊಂಡು ಹೋದರೆಅವರಿಗೆ 2000ರೂಬಹುಮಾನ ನೀಡಲಾಗುತ್ತದೆಹಣ ಪಾವತಿಯ ಸಾಮರ್ಥ್ಯದ ಬಗ್ಗೆ ಚಿಂತೆ ಮಾಡದೆಆಸ್ಪತ್ರೆಗಳು ಅಪಘಾತಗೊಳಗಾದವರ ಚಿಕಿತ್ಸೆಗೆ ತುರ್ತು ಆದ್ಯತೆ ನೀಡುವುದು ಹಾಗೂ ತುರ್ತು ಆರೈಕೆಗಾಗಿ ಇದರ ಎಲ್ಲಾ ವೆಚ್ಚಗಳನ್ನು ಸರಕಾರ ಭರಿಸಲಿದೆ ಲಾಭ ಪಡೆಯಲು ಸಂತ್ರಸ್ತರು ದೆಹಲಿ ನಿವಾಸಿಗಳೇ ಆಗಬೇಕೆಂದೇನಿಲ್ಲಆದರೆ ಅವರು ದೆಹಲಿಯಲ್ಲಿ ನಡೆದ ಗಾಯಾಳುಗಳಾಗಿರಬೇಕುಅದಲ್ಲದೆ ಎಲ್ಲಾ ಆಗ್ನಿ ಅವಘಡಆಸಿಡ್ ದಾಳಿಗೊಳಗಾದವರಿಗೆ ಹತ್ತಿರದ ಸರಕಾರಿ ಮತ್ತು ಖಾಸಗಿ ಆ ಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ.  


ಮೊಹಲ್ಲಾ ಕ್ಲಿನಿಕಿಗೆ ಮೆಚ್ಚುಗೆ : 


ವಿಶ್ವ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನನ್ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬರೆದ ಪಾತ್ರದಲ್ಲಿ ಮೊಹಲ್ಲಾ ಕ್ಲಿನಿಕ್ ಯೋಜನೆಯನ್ನು ಪ್ರಶಂಶಿಸಿದ್ದಾರೆ

ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ನಿರ್ದೇಶಕ ಗ್ರೊ ಹಾರ್ಲೆಮ್ ಬ್ರುಂಡ್ಲ್ಯಾಂಡ್ ಅವರು, "ಮೊಹಲ್ಲಾ ಕ್ಲಿನಿಕ್ ಗಳು ದೆಹಲಿಯ ನಿವಾಸಿಗಳಿಗೆ ಸಾರ್ವತ್ರಿಕ ಆರೋಗ್ಯ ಸೇವೆ ತರಬಹುದುದೆಹಲಿಯ ಆರೋಗ್ಯ ಸುಧಾರಣೆಗಳು ಭಾರತದಲ್ಲಿ ವಿಶೇಷ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಲುಸಾರ್ವತ್ರಿಕ ಆರೋಗ್ಯ ಸೇವೆಯನ್ನು ತನ್ನ ಜನರಿಗೆ ತರುವ ಅತ್ಯುತ್ತಮ ತಂತ್ರವೆಂದು ತೋರುತ್ತದೆ." ಎಂದಿದ್ದಾರೆ

ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯವು ತನ್ನ ಸೋಶಿಯಲ್ ಇನ್ನೋವಷನ್ ರಿವ್ಯೂ ನಲ್ಲಿಮೊಹಲ್ಲಾ ಕ್ಲಿನಿಕ್ ಗಳೆಂದು ಜನಪ್ರಿಯವಾಗಿರುವ ನೆರೆಹೊರೆ ಚಿಕಿತ್ಸಲಯಗಳ ಮೂಲಕ ಉಚಿತ ಪ್ರಾಥಮಿಕ ವೈದ್ಯಕೀಯ ಆರೋಗ್ಯ ಸೇವೆ ನೀಡುವ ದೆಹಲಿ ಸರ್ಕಾರದ ಪ್ರಯತ್ನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ

ಮೊಹಲ್ಲಾ ಕ್ಲಿನಿಕ್ ಬಗ್ಗೆ ವಾಷಿಂಗ್ಟನ್ ಪೋಸ್ಟ್, "ಅರವಿಂದ್ ಕೇಜ್ರಿವಾಲ್ ಅವರ ಮೊಹಲ್ಲಾ ಕ್ಲಿನಿಕ್ ನಿಂದ ಅಮೆರಿಕಾ ಕಲಿಯಬೇಕುಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಿಸಿದೆ


ಕರ್ನಾಟಕ ಆರೋಗ್ಯ ಮಂತ್ರಿ ಭೇಟಿ 


ಕರ್ನಾಟಕ ಆರೋಗ್ಯ ಮಂತ್ರಿ ಕೆ ಆರ್ ರಮೇಶ್ ಕುಮಾರ್ ಅವರು ದೆಹಲಿ ಆರೋಗ್ಯ ಮಂತ್ರಿ ಸತೀಂದರ್ ಜೈನ್ ಅವರನ್ನು ಭೇಟಿಮಾಡಿ ಮೊಹಲ್ಲಾ ಕ್ಲಿನಿಕ್ ಮತ್ತು ಪಾಲಿಕ್ಲಿನಿಕ್ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರುಮೊಹಲ್ಲಾ ಕ್ಲಿನಿಕ್ ಮತ್ತು ಪಾಲಿಕ್ಲಿನಿಕ್ ವೀಕ್ಷಿಸಿದ ಕರ್ನಾಟಕ ಆರೋಗ್ಯ ಮಂತ್ರಿ ಮೊಹಲ್ಲಾ ಕ್ಲಿನಿಕ್ ನಂತಹ ಆರೋಗ್ಯ ಕೇಂದ್ರಗಳನ್ನು ಕರ್ನಾಟಕದಲ್ಲಿ ತೆರೆಯುದಾಗಿ ತಿಳಿಸಿದರು







ನೆಚ್ಚಿನ ಪೋಸ್ಟ್