ಉಳಿದ ರಾಜ್ಯಗಳಂತೆ ದೆಹಲಿಯಲ್ಲಿ ಕೂಡ ಸರಕಾರಿ ಶಾಲೆಗಳ ಗುಣಮಟ್ಟ ಸರಿ ಇರಲಿಲ್ಲ. ರಾಜಕಾರಣಿಗಳ ನಿರ್ಲಕ್ಷದಿಂದ ಶಿಕ್ಷಣ ಖಾಸಗಿ ಶಾಲೆಗಳಿಗೆ ವ್ಯವಹಾರವಾಗಿತ್ತು. ಸರ್ಕಾರಿ ಶಾಲೆಗಳ ಕೊಠಡಿಗಳ ಮತ್ತು ಶಿಕ್ಷಕರ ಕೊರತೆಯು ಇತ್ತು. 2015ರಲ್ಲಿ ದೆಹಲಿ ಸರಕಾರ ಬಜೆಟ್ನಲ್ಲಿ ಶಿಕ್ಷಣಕ್ಕಾಗಿ ದುಪ್ಪಟ್ಟು ಹಣವನ್ನು ಮೀಸಲಿಡಲಾಯಿತು.
ದೆಹಲಿ ಸರ್ಕಾರ ಮಾಡಿದ ಶೈಕ್ಷಣಿಕ ಕ್ರಾಂತಿ ಇತರ ರಾಜ್ಯಗಳು ಸಹ ಅನುಸರಿಸಲು ಯೋಗ್ಯವಾಗಿದೆ. ದೆಹಲಿ ಶಿಕ್ಷಣ ಕ್ರಾಂತಿಯ ಅರ್ಥಮಾಡಿಕೊಳ್ಳಲು ಪ್ರತಿಯೊಂದರಲ್ಲೂ ಸರ್ಕಾರದ ಕೆಲಸದ ಬಗ್ಗೆ ತಿಳುವಳಿಕೆ ಅಗತ್ಯ.
ಚುನೌತಿ 2018
2013-14ರಿಂದ ಮಕ್ಕಳ ತೇರ್ಗಡೆ ಶೇಕಡ ನಿರಂತರವಾಗಿ ಇಳಿದಿದ್ದೂ ಸರಿಸುಮಾರು 50% ರಷ್ಟಿದೆ. ಇದಕ್ಕೆ ಕಾರಣ ಪ್ರಾಥಮಿಕ ಹಂತದಲ್ಲಿನ ಕಲಿಕ ಕೊರತೆ, ಪ್ರತಿವರ್ಷ ಮಗುವನ್ನು ಉನ್ನತ ವರ್ಗಕ್ಕೆ ಪಾಸು ಮಾಡಿರುವುದೇ ಆಗಿದೆ. ಮಗು ಸಾಮಾನ್ಯ ಗಣಿತವನ್ನು ಉತ್ತರಿಸಲಾಗದೆ ಮತ್ತು ಸರಳ ಪದಗಳನ್ನು ಬರೆಯಲು ಹಾಗೂ ಓದಲಾಗದೆ ಇರುದಕ್ಕೆ ಕಾರಣ ದುರ್ಬಲ ಅಡಿಪಾಯ. ಇದರಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು 9ನೇ ತರಗತಿಯಿಂದ 10ನೇ ತರಗತಿಗೆ ತೇರ್ಗಡೆ ಹೊಂದಲು ಕಷ್ಟವಾಗಿತ್ತು.
ಚುನೌತಿ 2018ರ ಗುರಿ:
- 9ನೇ ತರಗತಿಗಳ ತೇರ್ಗಡೆ ಶೇಕಡ ಗಣನೀಯ ಏರಿಕೆ.
- ಮೇಲಿನ ಎಲ್ಲಾ ಪ್ರಾಥಮಿಕ ದರ್ಜೆಯ ವಿದ್ಯಾರ್ಥಿಗಳು ಸಾಮಾನ್ಯ ಗಣಿತವನ್ನು ಉತ್ತರಿಸುವಂತೆ ಮತ್ತು ಸರಳ ಪಠ್ಯದ ಪದಗಳನ್ನು ಓದುವಂತೆ ಹಾಗೂ ಬರೆಯುವಂತೆ ಮಾಡುವುದು.
ಚಟುವಟಿಕೆ:
ಎಲ್ಲಾ ಮಕ್ಕಳ ಕಲಿಕೆಯ ಮಟ್ಟದ ಮೂಲ ಮೌಲ್ಯಮಾಪನ (6ನೇ ತರಗತಿಯಿಂದ 9ನೇ ತರಗತಿಯವರೆಗೆ) 3 ಆಧಾರದ ಮೇಲೆ ಮಾಡಲಿಯಿತು. ಅದು :
- ಹಿಂದಿ ಪಠ್ಯವನ್ನು ಓದುವ ಸಾಮರ್ಥ್ಯ
- ಇಂಗ್ಲೀಷ್ ಪಠ್ಯವನ್ನು ಓದುವ ಸಾಮರ್ಥ್ಯ
- ಗಣಿತದಲ್ಲಿ ಮೂಲಭೂತ ಪ್ರಾವೀಣ್ಯತೆ
ಓದುವ ಅಭಿಯಾನ
ಮಕ್ಕಳು ತಮ್ಮ ಪಠ್ಯಪುಸ್ತಕ ಓದು ಕಲಿಸುವ ಕಾರಣಕ್ಕೆ ಓದುವ ಅಭಿಯಾನ ಶಿಕ್ಷಕರ ದಿನದಂದು ಕಾರ್ಯರೂಪಕ್ಕೆ ತರಲಾಯಿತು. ಮಕ್ಕಳ ದಿನದಂದು ಎಲ್ಲಾ ಮಕ್ಕಳು ಸರಾಗವಾಗಿ ಓದುವ ಉದ್ದೇಶ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರದ್ದಾಗಿತ್ತು. ಈ ಅಭಿಯಾನ 6ನೇ ತರಗತಿಯಿಂದ 8ನೇ ತರಗತಿಯ ದೆಹಲಿ ಸರ್ಕಾರಿ ಶಾಲೆಯಲ್ಲಿರುವ ತಮ್ಮ ಪಠ್ಯಪುಸ್ತಕ ಓದಲಾಗದ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಲಾಗಿತ್ತು (ಸುಮಾರು 3,52,112 ವಿದ್ಯಾರ್ಥಿಗಳು). 30 ಸಣ್ಣ ಕಥೆಗಳು, 30 ಪ್ಯಾರಾಗ್ರಾಫ್ ಗಳು ಮತ್ತು ವರ್ಡ್ ಕಾರ್ಡ್ ಗಳು, 48 ಚಟುವಟಿಕೆಗಳು (ಅದನ್ನು ವಿವಿಧ ಓದುವ ಹಂತಗಳಲ್ಲಿ ಉಪಯೋಗಿಸುವಂತ ಚಟುವಟಿಕೆಗಳು), ಚಾರ್ಟ್ಸ್,ಕಾರ್ಡ್ ಗಳು, ಶಾಲೆಗಳಿಗೆ ಒದಗಿಸಲಾಯಿತು. ಶಿಕ್ಷಕರಿಗೆ ಸ್ಥಳದಲ್ಲೇ ನಿಯಮಿತವಾಗಿ ಭೇಟಿ ನೀಡುತ್ತಿದ್ದಾ ಮಾರ್ಗದರ್ಶಕ ಶಿಕ್ಷಕರಿಂದ ಸಹಾಯ ದೊರೆಯುತಿತ್ತು.
ವಾರಾಂತ್ಯದಲ್ಲಿ ಆಯೋಜಿಸಲಾದ 'ಓದುವ ಮೇಳ' ದಲ್ಲಿ ಪೋಷಕರನ್ನು ಆಮಂತ್ರಿಸಿ ತಮ್ಮ ಮಗುವಿಗೆ ತಾವೇ ಓದು ಕಲಿಸಲು ಸಹಾಯ ಮಾಡಬಹುದಾದ ಚಟುವಟಿಕೆಗಳನ್ನು ಪದರ್ಶಿಸಲಾಯಿತು. ಇದರ ಫಲಿತಾಂಶವಾಗಿ ಸರಿಸುಮಾರು 1 ಲಕ್ಷ ಮಕ್ಕಳು ಕಥೆಗಳನ್ನು ಓದುವಂತಾಯಿತು.
ಶಾಲಾಭಿವೃದ್ದಿಗೆ ಶಾಲಾ ನಿರ್ವಹಣಾ ಸಮಿತಿಗಳಿಗೆ ಅಧಿಕಾರ (ಎಸ್.ಎಂ.ಸಿ.)
ಶಾಲಾಭಿವೃದ್ದಿಗೆ ಶಾಲಾ ನಿರ್ವಹಣಾ ಸಮಿತಿಗಳಿಗೆ ಅಧಿಕಾರ (ಎಸ್.ಎಂ.ಸಿ.)
ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 ಅಥವಾ ಆರ್.ಟಿ.ಇ.ಯ ಅನುಸಾರ ಎಲ್ಲಾ ಶಾಲೆಗಳು (ಅನುದಾನರಹಿತ ಹೊರತುಪಡಿಸಿ) ಶಾಲಾ ನಿರ್ವಹಣಾ ಸಮಿತಿಯನ್ನು ರೂಪಿಸಬೇಕು (16 ಸದಸ್ಯರು). ಇದರಲ್ಲಿ ಶಾಲೆಯ ಮುಖ್ಯಸ್ಥರು, ಶಿಕ್ಷಕ ಸಂಚಾಲಕ, ಸಾಮಾಜಿಕ ಕಾರ್ಯಕರ್ತ, ಸ್ಥಳೀಯ ಅಧಿಕಾರಿಗಳ ಸದಸ್ಯರ ಜೊತೆಗೆ 12 ಪೋಷಕರು ಸದಸ್ಯರಾಗಿರಬೇಕು.
ಪ್ರಮುಖ ಕಾರ್ಯಗಳು:
- ಶಾಲೆಯ ಕೆಲಸದ ಮೇಲ್ವಿಚಾರಣೆ.
- ಶಾಲೆಯ ಅಭಿವೃದ್ಧಿ ಯೋಜನೆ ರಚಿಸುವಲ್ಲಿ ಶಾಲಾ ಅಧಿಕಾರಿಗಳಿಗೆ ಸಹಾಯ.
- ವಿದ್ಯಾರ್ಥಿಗಳ ದಾಖಲಾತಿ ಮತ್ತು ನಿರಂತರ ಹಾಜರಾತಿಯನ್ನು ಖಚಿತಪಡಿಸುವುದು.
- ಶಾಲೆಯ ಮಧ್ಯಾಹ್ನ ಊಟದ ಮೇಲ್ವಿಚಾರಣೆ.
- ಶಿಕ್ಷಕರು ನಿರ್ದಿಷ್ಟ ಪಡಿಸಿದ ಶೈಕ್ಷಣಿಕ ಕರ್ತವ್ಯದ ಹೊರತು ಬೇರೆ ಯಾವುದೇ ಕರ್ತವ್ಯದ ಹೊರೆಯಾಗದಂತೆ ನೋಡುವುದು.
ಚಟುವಟಿಕೆ:
ಶಿಕ್ಷಣ ನಿರ್ದೇಶನಾಲಯವು ಸಾಜ್ಹಾ (ಸ್ವಯಂಸೇವಾ ಸಂಸ್ಥೆ) ಯೊಂದಿಗೆ ಜೊತೆಗೂಡಿ 2016-17ರ ಶೈಕ್ಷಣಿಕ ವರ್ಷದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಲಾಯಿತು. ಅದರಲ್ಲಿ
1. ಶಾಲಾ ನಿರ್ವಹಣಾ ಸಮಿತಿಗಳಿಗೆ ತರಬೇತಿ:
ಈ ಕಾರ್ಯಕ್ರಮವು ಪರಿಣಾಮಕಾರಿ ತರಬೇತಿ ವಿಷಯ, ಮನವರಿಕೆ ಮಾಡುವ ರೀತಿ, ರಾಜ್ಯ ಮಟ್ಟದ ಪಕ್ರಿಯೆಯನ್ನು ಕೇಂದ್ರೀಕರಿಸಲಾಯಿತು.
2. ಆಡಳಿತ:
ಸರಳೀಕೃತ ಕುಂದುಕೊರತೆಯ ಪರಿಹರಿಸುವ ಪಕ್ರಿಯೆ, ಶಾಲೆಯ ಮತ್ತು ಪೋಷಕರ ಹೆಚ್ಚಿನ ಅವಶ್ಯಕತೆಯ ಬಗ್ಗೆ ವಿವರಣೆ. ದಾಖಲಾತಿ ಸಮಿತಿ, ಎಸ್.ಎಂ.ಸಿ ಸಭಾ ಮತ್ತು ಮೊಬೈಲ್ ಅಪ್ಲಿಕೇಶನ್ ಇವು ಪ್ರಮುಖ ಸಾಧನೆಗಳು.
3. ಎಸ್.ಎಂ.ಸಿ ಸಭೆಗಳು:
ಕ್ಷೇತ್ರದ ಎಲ್ಲಾ ಶಾಲೆಯ ಪೋಷಕ ಪ್ರತಿನಿಧಿಗಳು ಎಸ್.ಎಂ.ಸಿ ಸಭೆಯಲ್ಲಿ ಶಾಲೆ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಒಂದರ ನಂತರ ಒಂದು ಸಂಬಂಧಪಟ್ಟ ಇಲಾಖೆಯೊಡನೆ ಮಾತುಕತೆ ನಡೆಸಲಾಯಿತು.
4. ಎಸ್.ಎಂ.ಸಿ ಆಪ್ ಬಳಕೆ:
ಒಂದು ಸರಳ ಮೊಬೈಲ್ ಅಪ್ಲಿಕೇಶನ್ ಮೂಲಕ ಶಾಲೆಗಳು, ಸಮುದಾಯಗಳು, ಪೋಷಕರು ನಿರ್ಧಾರ ನಿರ್ಣಾಯಕರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದಾರೆ. ಎಸ್.ಎಂ.ಸಿ ಗಳು 'ಓದುವ ಮೇಳಾ' ನಡೆಸಲಾಯಿತು.
ಮೆಗಾ ಪೋಷಕರ ಶಿಕ್ಷಕರ ಸಭೆ
ಮಕ್ಕಳ ಎಲ್ಲಾ ರೀತಿಯ ಅಭಿವೃದ್ಧಿಗೆ ಪೋಷಕರ ಮತ್ತು ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಪರಿಣಾಮಕಾರಿ ರೀತಿಯಲ್ಲಿ ತಮ್ಮ ಪ್ರಯತ್ನಗಳನ್ನು ಸಜ್ಜುಗೊಳಿಸುವುದು ಅತ್ಯಗತ್ಯ. ಅದಕ್ಕೆ ಪೋಷಕರ-ಶಿಕ್ಷಕರ ಸಂವಹನ ಕೊರತೆ ನೀಗಿಸಲು ಮತ್ತು ಸಾಮರಸ್ಯದ ಸಂಬಂಧವನ್ನು ಬೆಳೆಸಲು ಪೋಷಕರ-ಶಿಕ್ಷಕರ ಸಭೆಯನ್ನು 2016ರಿಂದ ಶಿಕ್ಷಣ ನಿರ್ದೇಶನಾಲಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದೊಡ್ಡಮಟ್ಟದಲ್ಲಿ ಪರಿಚಯಿಸಲಾಯಿತು.
ಚಟುವಟಿಕೆ:
ಎಲ್ಲಾ ಸರ್ಕಾರೀ ಶಾಲೆಯ ವಿದ್ಯಾರ್ಥಿಗಳ ಪೋಷಕರನ್ನು ತರಗತಿ ಶಿಕ್ಷಕರನ್ನು ಮತ್ತು ಸಂಬಂಧಪಟ್ಟ ವಿಷಯದ ಶಿಕ್ಷಕರನ್ನು ಭೇಟಿಮಾಡಲು ಆಮಂತ್ರಿಸಲಾಯಿತು. ಶಿಕ್ಷಕರನ್ನು ಪೋಷಕರಿಗೆ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮತ್ತು ವಿದ್ಯಾರ್ಥಿಗಳ ಕಲಿಕಾ ಕೌಶಲ್ಯ ಅಭಿವೃದ್ಧಿಗೆಪಟ್ಟ ಪ್ರಯತ್ನವನ್ನು ವಿವರಿಸಲಾಗುತ್ತದೆ.
ಮುಖ್ಯ ಅಂಶಗಳು: ಕ್ರಮಬದ್ಧತೆ, ಸಮಯನಿಷ್ಠೆ, ತರಗತಿ ಆರಂಭಿಸುವ ಮುಂಚಿತ ಯೋಜೆನೆಯ ಪ್ರಾಮುಖ್ಯತೆ ಮತ್ತು ಅಗತ್ಯತೆ ವಿವರಿಸಲಾಗುತ್ತದೆ.
ಈ ಸಭೆಯು ಮುಕ್ತ ಚರ್ಚೆಗೆ ಮತ್ತು ಪೋಷಕರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ತಿಳುವಳಿಕೆಗೆ ಕಾರಣವಾಯಿತು. ಎಲ್ಲಾ ಸಮಸ್ಯೆಗಳ ಹೊರತಾಗಿಯೂ ಹೆಚ್ಚಿನ ಸಂಖ್ಯೆಯಲ್ಲಿ ಹೆತ್ತವರು ಭಾಗವಹಿಸಿ ಸಭೆಗೆ ಸಾಕ್ಷಿಯಾದರು. ಶಾಲೆಯನ್ನು ಚೆನ್ನಾಗಿ ಅಲಂಕರಿಸಲಾಯಿತು. ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ಸಾಹದಿಂದ ಪರಸ್ಪರ ಸಂವಹನ ನಡೆಸಿದರು. ಪೋಷಕರ ಹಾಗೂ ಶಿಕ್ಷಕರ ನಡುವೆ ಸೇತುವೆ ನಿರ್ಮಾಣ ಮಾಡಲು ಎಲ್ಲಾ ಪ್ರಯತ್ನ ನಡೆಸಲಾಯಿತು. ಸಭೆಗೆ ಮುಂಚಿತವಾಗಿ ಆಮಂತ್ರಣವನ್ನು ಪೋಷಕರಿಗೆ ಕಳುಹಿಸಲಾಯಿತು. ಇದರ ಬಗ್ಗೆ ಎಸ್.ಎಂ.ಸಿ ಸದಸ್ಯರಿಂದ ಹಾಗೂ ತರಗತಿ ಶಿಕ್ಷಕರಿಂದ ಮತ್ತೊಮ್ಮೆ ನೆನಪಿಸಲಾಯಿತು. ಪೋಷಕರ ಮತ್ತು ಶಿಕ್ಷಕರ ಮತ್ತು ಶಿಕ್ಷಕರ ಮಗುವಿನ ಶೈಕ್ಷಣಿಕ ಪ್ರಗತಿಗೆ ಅತೀ ಮುಖ್ಯವಾಗಿದೆ. ಈ ಸಭೆ ಮೂಲಕ ಪೋಷಕರು ತಮ್ಮ ಮಗುವಿನ ಶೈಕ್ಷಣಿಕ ಪ್ರಗತಿ ಬಗ್ಗೆ ಅರಿವು ಮೂಡಿಸಲಿದೆ ಮತ್ತು ಶಿಕ್ಷಕರು ಮಗುವಿನ ಶೈಕ್ಷಣಿಕ ಉನ್ನತಿಗೆ ತಮ್ಮ ಪ್ರಯತ್ನಗಳನ್ನು ಹೆಚ್ಚಿಸಲು ಪೋಷಕರನ್ನು ತೊಡಗಿಸಿಕೊಳ್ಳಬಹುದು.
ವಿದೇಶದಲ್ಲೂ ಶಿಕ್ಷಕರಿಗೆ ತರಬೇತಿ
ಶಾಲಾ ಪ್ರಾಂಶುಪಾಲರ ನಾಯಕತ್ವದ ಗುಣಮಟ್ಟವನ್ನು ಗುರಿತಿಸಲು ಸಹಾಯ ಮಾಡಲು ಹಲವಾರು ಕಾರ್ಯಕ್ರಮಗನ್ನು ಹಮ್ಮಿಕೊಳ್ಳಲಾಯಿತು. ಹಲವು ದೆಹಲಿಯ ಶಾಲೆಗಳನ್ನು ಬೇರೆ ಶಾಲೆಗಳಿಗೆ 'ಅಭಿವೃದ್ಧಿಯ ಮಾದರಿ' ಯನ್ನಾಗಿ ಆಯ್ಕೆ ಮಾಡಲಾಯಿತು. ಸುಮಾರು 500 ಶಾಲಾ ಮುಖ್ಯಸ್ಥರು ಐ.ಐ.ಎಮ್. ಅಹಮದಾಬಾದ್ ಮತ್ತು ಲಖನೌನಲ್ಲಿ ನಡೆದ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅವರಲ್ಲಿ 90 ಶಾಲಾ ಮುಖ್ಯಸ್ಥರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು, ಅವರಲ್ಲಿ 30 ಶಾಲಾ ಮುಖ್ಯಸ್ಥರು ಶಾಲಾ ಶಿಕ್ಷಣ ರೀತಿಯನ್ನು ಅರ್ಥಮಾಡಿಕೊಳ್ಳಲು ಫಿನ್ಲ್ಯಾಂಡ್ ಗೆ ಭೇಟಿ ನೀಡಿದರು.
ಮೂಲಸೌಕರ್ಯ
ಗ್ರಂಥಾಲಯ :
ದೆಹಲಿ ಸರ್ಕಾರ ವಾರ್ಷಿಕ ಬಜೆಟ್ 2017-18ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲು 100 ಕೋಟಿ ಮೀಸಲಿಡಲಾಯಿತು. ವಿದ್ಯಾರ್ಥಿಗಳ ನಡುವೆ ಸೃಜನಶೀಲತೆಯ ಪ್ರಜ್ಞೆಯನ್ನು ಕಲ್ಪಿಸಲು ಮತ್ತು ಓದುವ ಅಭ್ಯಾಸ ಉತ್ತೇಜಿಸಲು ಈ ಕ್ರಮ. ಸುಮಾರು 454 ವಿದ್ಯಾಲಯದಲ್ಲಿ ನರ್ಸರಿಯಿಂದ 5ನೇ ತರಗತಿಯವರೆಗೆ 4500
ವಿಭಾಗಗಳಲ್ಲಿ 'ಕ್ಲಾಸ್ ಲೈಬ್ರೆರಿ' ಯನ್ನು ಪರಿಚಯಿಸಲಾಯಿತು. 400 ಹೊಸ ಗ್ರಂಥಾಲಯಗಳನ್ನು 6ನೇ ತರಗತಿಯಿಂದ 10ನೇ ತರಗತಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಪರಿಚಯಿಸಲಾಯಿತು. 1029 ಶಾಲೆಗಳಲ್ಲಿ ಗ್ರಂಥಾಲಯದ ಸೌಲಭ್ಯ ಅಧುನೀಕರಿಸಲಾಯಿತು.
ಹೊಸ ಸರ್ಕಾರಿ ಶಾಲೆಗಳ ನಿರ್ಮಾಣ :
8000ಕ್ಕೂ ಹೆಚ್ಚು ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ. 54 ಮಾದರಿ ಶಾಲೆಗಳ ಮೂಲ ಸೌಕರ್ಯವನ್ನು ನವೀಕರಿಸಲಾಗುತ್ತಿದೆ. ಆಧುನೀಕ ಸೌಲಭ್ಯ ಒಳಗೊಂಡ ಪ್ರಯೋಗಾಲಯಗಳನ್ನು ಮತ್ತು ಈಜುಕೊಳಗಳನ್ನು ನಿರ್ಮಿಸಲಾಯಿತು. ಕಲಾ ಸೌಲಭ್ಯ ಒಳಗೊಂಡಿರುವ 22 ಹೊಸ ಶಾಲೆಗಳನ್ನು ನಿರ್ಮಿಸಲಾಗಿದೆ. ಹೊಸ ತರಗತಿ ಕೊಠಡಿಗಳ ನಿರ್ಮಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಬಹುದಾಗಿದೆ. ಸುಸಜ್ಜಿತ ಸಿಬ್ಬಂದಿ ಕೊಠಡಿ, ಸುಲಭ ಸಂಚಾರಕ್ಕೆ ಲಿಫ್ಟ್ ಗಳನ್ನೂ ಅಳವಡಿಸಲಾಗಿದೆ.
ವಸತಿ ವ್ಯವಸ್ಥಾಪಕ :
ಶಾಲಾ ಮುಖ್ಯಸ್ಥರು ಗುತ್ತಿಗೆ ಆಧಾರದ ಮೇಲೆ ವಸತಿ ವ್ಯವಸ್ಥಾಪಕರನ್ನು ನೇಮಿಸಲು ಅಧಿಕಾರ ಕೊಡಲಾಗಿದೆ ಮತ್ತು ವ್ಯವಸ್ಥಾಪಕ ತನ್ನ ಎಲ್ಲಾ ಕರ್ತವ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವ ಹಾಗೆ ನೋಡಿಕೊಳ್ಳುವುದು ಶಾಲಾ ಮುಖ್ಯಸ್ಥರ ಕೆಲಸ. ಮೊಬೈಲ್ ಅಪ್ಲಿಕೇಶನ್ ಮೂಲಕ ವಸತಿ ವ್ಯವಸ್ಥಾಪಕ ಶಾಲಾ ವರದಿಯನ್ನು ಸಲ್ಲಿಸಬೇಕು, ಶೌಚಾಲಯಗಳ ಶುಚಿತ್ವ ಮತ್ತು ಇತರ ಕಾರ್ಯಗಳನ್ನು ಮಾಡಬೇಕು. ಶಾಲಾ ವಿದ್ಯಾರ್ಥಿಗಳ, ಸಿಬ್ಬಂದಿಗಳ ಹಾಗು ಶಾಲಾ ಆಸ್ತಿಯ ಕಟ್ಟುನಿಟ್ಟಿನ ಭದ್ರತೆಯ ವ್ಯವಸ್ಥೆಯನ್ನು ಭದ್ರತಾ ಸಿಬ್ಬಂದಿಯ ಮೂಲಕ ಒದಗಿಸುವುದು, ಸಿಸಿಟಿವಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೋ ಎಂದು ನೋಡಿಕೊಳ್ಳುವುದು, ವಿದ್ಯುತ್ ಮತ್ತು ನೀರಿನ ಸರಬರಾಜು ಖಾತರಿಪಡಿಸುವುದು ಮತ್ತು ಸಮಯಕ್ಕೆ ಸರಿಯಾಗಿ ಹಣ ಪಾವತಿಸುವುದು, ದುರಸ್ತಿ ಮತ್ತು ಕೆಲಸದ ವರದಿಯನ್ನು ಸರಿಯಾಗಿ ಇಟ್ಟುಕೊಳ್ಳುವುದು ವಸತಿ ವ್ಯವಸ್ಥಾಪಕರ ಕೆಲಸ.
ಕ್ರೀಡೆ :
ಶಾಲಾ ಸಮಯದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗಿದೆ. ವಲಯಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಕ್ರೀಡಾಳುಗಳಿಗೆ ನಗದು ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟ್ಟುಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಕ್ರೀಡೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದಲ್ಲಿ ಮೊತ್ತವನ್ನು ಬಜೆಟ್ನಲ್ಲಿ ಮಂಜೂರು ಮಾಡಲಾಗಿದೆ.
'ಸಂತೋಷ'ದ ಪಾಠ :
ದೆಹಲಿ ಸರ್ಕಾರ ಇನ್ನುಮುಂದೆ ಶಾಲಾ ಮಕ್ಕಳಿಗೆ 'ಸಂತೋಷ'ದ ಬಗ್ಗೆ ಕಲಿಸಲಿದೆ. ಈ ಬಗ್ಗೆ ಪಠ್ಯಕ್ರಮವನ್ನು ರಚಿಸಲು ಸರ್ಕಾರಿ ಶಾಲಾ ಶಿಕ್ಷಕರನ್ನು ಒಳಗೊಂಡ ಒಂದು ತಜ್ಞರ ತಂಡವನ್ನು ರಚಿಸಿದೆ ಎಂದು ಈಗಾಗಲೇ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ಇಡೀ ಪಠ್ಯಕ್ರಮವು ಸಂಪೂರ್ಣವಾಗಿ ಚಟುವಟಿಕೆ ಆಧಾರಿತವಾಗಿರುತ್ತದೆ ಹಾಗೂ ಯಾವುದೇ ಔಪಚಾರಿಕ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.