ಅಮೆರಿಕದ ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್ ಅವರು ದಿಲ್ಲಿಯ ಶಾಲೆಯೊಂದರ 'ಸಂತೋಷದ ತರಗತಿ'ಗೆ ಮಂಗಳವಾರ ಭೇಟಿ ನೀಡಿದರು. ಒತ್ತಡಮುಕ್ತ ಕಲಿಕೆಯ ಉದ್ದೇಶದಿಂದ ರೂಪುಗೊಂಡಿರುವ 'ಹ್ಯಾಪಿನೆಸ್ ಕ್ಲಾಸ್'ಗಳು ದೇಶ- ವಿದೇಶದ ತಜ್ಞರ ಗಮನ ಸೆಳೆಯುತ್ತಿವೆ. ದಕ್ಷಿಣ ದಿಲ್ಲಿಯ ಮೋತಿಬಾಗ್‌ನ ಸರ್ವೋದಯ ಕೋ ಎಜುಕೇಶನ್ ಸೀನಿಯರ್ ಸೆಕೆಂಡರಿ ಸ್ಕೂಲ್‌ಗೆ ಮಂಗಳವಾರ ವಿಶೇಷ ಭೇಟಿ ನೀಡಿದ ಮೆಲಾನಿಯಾ ಟ್ರಂಪ್, ಅಲ್ಲಿ ನಡೆಯುವ 'ಹ್ಯಾಪಿನೆಸ್ ಕ್ಲಾಸ್'ನ್ನು ವೀಕ್ಷಿಸಿದರು. ಶಾಲೆಯ ಮಕ್ಕಳು ಅವರನ್ನು ಆರತಿಯೆತ್ತಿ ತಿಲಕವಿಟ್ಟು ಬರಮಾಡಿಕೊಂಡರು. 45 ನಿಮಿಷಗಳ ಕ್ಲಾಸ್ ಚಟುವಟಿಕೆಯನ್ನು ಪೂರ್ತಿಯಾಗಿ ವೀಕ್ಷಿಸಿದ ಮೆಲಾನಿಯಾ, ತರಗತಿಯ ಬಗ್ಗೆ ಮಕ್ಕಳ ಅಭಿಪ್ರಾಯ ಪಡೆದುಕೊಂಡರು. ಕೆಲವು ಮಕ್ಕಳ ಪ್ರಾಜೆಕ್ಟ್ ವರ್ಕ್ ವೀಕ್ಷಿಸಿದರು. ಕೆಲವು ಮಕ್ಕಳೊಡನೆ ಮುಕ್ತವಾಗಿ ಹರಟಿದರು. ಒಂದು ಗಂಟೆಯ ಶಾಲೆ ಭೇಟಿಯ ಬಳಿಕ ಹೊರಟು ನಿಂತಾಗ ಅವರು ಹೇಳಿದ ಮಾತು: ''ಇಲ್ಲಿರುವ ಮಕ್ಕಳು ಪ್ರತಿದಿನದ ಮುಂಜಾನೆಯನ್ನು ಕತೆ ಹೇಳುವುದು, ಪ್ರಕೃತಿಯೊಡನೆ ಸಂಭಾಷಿಸುವುದರ ಮೂಲಕ ನೆಮ್ಮದಿಯಿಂದ ಆರಂಭಿಸುತ್ತಾರೆ. ಇದು ತುಂಬ ಸ್ಫೂರ್ತಿ ನೀಡುವಂಥದು. ನಮ್ಮ ದಿನವನ್ನು ಇದಕ್ಕಿಂತ ಅರ್ಥಪೂರ್ಣವಾಗಿ ಸ್ವಾಗತಿಸುವುದನ್ನು ನಾನು ಊಹಿಸಲಾರೆ.'' ತೆರಳುವ ಮುನ್ನ, ಮಕ್ಕಳಲ್ಲಿಉತ್ತಮ ಮೌಲ್ಯಗಳನ್ನು ಬೆಳೆಸುತ್ತಿರುವುದಕ್ಕಾಗಿ ಶಿಕ್...
ದೆಹಲಿ ಆಮ್ ಆದ್ಮಿ ಪಕ್ಷ ಸರ್ಕಾರದ ಮಾಹಿತಿ.