- ಅರವಿಂದ್ ಕೇಜ್ರಿವಾಲ್ ಉತ್ತಮ ಶಿಕ್ಷಿತ ನಾಗರಿಕರಿಲ್ಲದ ಯಾವುದೇ ಅಭಿವೃದ್ಧಿ ಹೊಂದಿದ ದೇಶವಿಲ್ಲ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಎಣಿಸಬೇಕೆಂದು ಭಾರತ ಬಯಸಿದರೆ ಎಲ್ಲಾ ನಾಗರಿಕರಿಗೆ ಉತ್ತಮ ಶಿಕ್ಷಣವನ್ನು ಒದಗಿಸುವುದು ಅವಶ್ಯಕ. ಅಭಿವೃದ್ಧಿಯ ಬಗ್ಗೆ ಮಾತನಾಡುವುದು ಸುಲಭ. ಆದರೆ, ಇದು ವಾಸ್ತವವಾಗಿ ನಡೆಯಲು ಕಷ್ಟದ ಪ್ರಯತ್ಮಗಳನ್ನು ಮಾಡಬೇಕಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ದೆಹಲಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಸುಧಾರಣೆಗಳು ನಡೆದಿದೆ. ನಾವು ಅಧಿಕಾರ ವಹಿಸಿಕೊಂಡಾಗ, ಸರ್ಕಾರಿ ಶಾಲೆಗಳು ಕೆಟ್ಟ ಸ್ಥಿತಿಯಲ್ಲಿದ್ದವು. ಶೌಚಾಲಯಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅನೇಕ ಶಾಲೆಗಳಲ್ಲಿ ಸರಿಯಾದ ಕುಡಿಯುವ ನೀರಿನ ಸೌಲಭ್ಯಗಳಿರಲಿಲ್ಲ. ಪೀಠೋಪಕರಣಗಳು ಮುರಿಯಲ್ಪಟ್ಟಿದ್ದವು. ಬ್ಲ್ಯಾಕ್ ಬೋರ್ಡ್ ಗಳು ಹಳೆಯದಾಗಿದ್ದವು. ಯಾವುದೇ ಶುಚಿತ್ವ ಇಲ್ಲದಿರುವುದು. ಕಟ್ಟಡಗಳು ಹಾಳು ಬಿದ್ದಿರುವುದು. ಅನೇಕ ತರಗತಿಗಳಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು. ಸಂಕ್ಷಿಪ್ತವಾಗಿ, ಸರ್ಕಾರಿ ಶಾಲೆಗಳು ಅತೀ ಕತ್ತಲೆ ಕವಿದ ಸ್ಥಿತಿಯಲ್ಲಿತ್ತು. ನಾವು ಅಧಿಕಾರ ವಹಿಸಿಕೊಂಡ ತಕ್ಷಣ, ನಾವು 500 ಕೋಟಿ ರೂ.ಗಳಿಂದ 1,000 ಕೋಟಿ ರೂ.ಗೆ ಶಿಕ್ಷಣದ ವೆಚ್ಚವನ್ನು ದ್ವಿಗುಣಗೊಳಿಸಿದ್ದೇವೆ. ನಾವು ಮೊದಲು ಮೂಲಸೌಕರ್ಯದ ಕೊರತೆಯನ್ನು ನಿಭಾಯಿಸಿದ್ದೇವೆ. ಶುಚಿತ್ವ, ಭದ್ರತೆ, ಶೌಚಾಲಯಗಳು ಮತ್ತು ಕುಡಿಯುವ ನೀರು - ಈ ನಾಲ್ಕು ಪ್...
ದೆಹಲಿ ಆಮ್ ಆದ್ಮಿ ಪಕ್ಷ ಸರ್ಕಾರದ ಮಾಹಿತಿ.