ಶಿಕ್ಷಣ ಹಾಗೂ ಆರೋಗ್ಯ ಬಹಳ ಮುಖ್ಯ . ಈ ಕ್ಷೇತ್ರದಲ್ಲಿ ದೆಹಲಿ ಸರಕಾರ ಮಾಡಿರುವ ಸಾಧನೆ ಮೆಚ್ಚುವಂತಹದ್ದು . ದೆಹಲಿ ಸರ್ಕಾರವು ಮೂರು ಹಂತದ ಆರೋಗ್ಯ ವ್ಯವಸ್ಥೆ ಮೂಲಕ ಉಚಿತ ಔಷಧಿಗಳನ್ನು , ಪರೀಕ್ಷೆಗಳನ್ನು , ಹಲವಾರು ಜೀವ ಉಳಿಸುವಂತಹ ಶಸ್ತ್ರಚಿಕಿತ್ಸೆಯ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ . ಮೂರು ಹಂತದ ಆರೋಗ್ಯ ವ್ಯವಸ್ಥೆಗಳು : ಮೊಹಲ್ಲಾ ಕ್ಲಿನಿಕ್ಸ್ , ಪಾಲಿಕ್ಲಿನಿಕ್ಸ್ ಮತ್ತು ಆಸ್ಪತ್ರೆಗಳು . ಮೊಹಲ್ಲಾ ಕ್ಲಿನಿಕ್ಸ್ ( ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್ಸ್ ) : ಮೊಹಲ್ಲಾ ಕ್ಲಿನಿಕ್ ಗಳು ನೆರೆಹೊರೆಯ ಚಿಕಿತ್ಸಾಲಯಗಳು . ಇದನ್ನು ದೆಹಲಿ ಸರಕಾರ ನಗರದ 160 ಸ್ಥಳಗಳಲ್ಲಿ ಸ್ಥಾಪಿಸಿ , ಉತ್ತಮ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ . ವೈದ್ಯಕೀಯ ತಪಾಸನೆ , ಔಷಧಿಗಳು , ಪರೀಕ್ಷೆಗಳು ಎಲ್ಲವು ಉಚಿತವಾಗಿದೆ . ಯಾವುದೇ ಮೊಹಲ್ಲಾ ಕ್ಲಿನಿಕ್ ಗಳಲ್ಲಿ ಉಚಿತವಾಗಿ 109 ಅಗತ್ಯ ಔಷಧಿಗಳು , 212 ರೋಗನಿರ್ಣಯದ ಪರೀಕ್ಷೆಗಳು ಲಭ್ಯವಿದೆ . ...
ದೆಹಲಿ ಆಮ್ ಆದ್ಮಿ ಪಕ್ಷ ಸರ್ಕಾರದ ಮಾಹಿತಿ.