ಬಿಜೆಪಿ ಮತ್ತು ಕಾಂಗ್ರೆಸ್ಗೆ ತೀವ್ರ ಪೈಪೋಟಿ ನೀಡುವ ಆಮ್ ಆದ್ಮಿ ಪಕ್ಷ ಎದುರಾಗಿದ್ದು, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆ ನಂತರ ಇದು ಕೂಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಪಕ್ಷವೆಂದರೆ ಒಂದು ಪಕ್ಷವು ರಾಷ್ಟ್ರೀಯವಾಗಿ ಅಸ್ತಿತ್ವವನ್ನು ಹೊಂದಿದೆ ಎಂದರ್ಥ. ಪ್ರಾದೇಶಿಕವಾಗಿ ಹುಟ್ಟಿಕೊಂಡ ಒಂದು ಪಕ್ಷವು ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಕೇವಲ 10 ವರ್ಷಗಳಲ್ಲಿ ದೆಹಲಿಯಲ್ಲಿ 2 ಬಾರಿ ಅಧಿಕಾರ, ಪಂಜಾಬ್‌ನಲ್ಲಿ ಸರಕಾರ ರಚನೆ, ಗೋವಾದಲ್ಲಿ 2 ಸೀಟು ಗಳಿಕೆ, ಅಭೂತಪೂರ್ವ ಗೆಲುವಿನ ಮೂಲಕ ದೆಹಲಿ ಮಹಾನಗರ ಪಾಲಿಕೆ ಯಲ್ಲಿ ಪಾರಮ್ಯ, ಮೊನ್ನೆಯ ಗುಜರಾತ್ ಚುನಾವಣೆಯಲ್ಲಿ 5 ಸೀಟು - ಇದು ಆಮ್ ಆದ್ಮಿ ಪಕ್ಷ ದ ಹೆಗ್ಗಳಿಕೆ. ಪ್ರಸ್ತುತ ದೆಹಲಿ ಯ ಆಮ್ ಆದ್ಮಿ ಕಚೇರಿ ಮುಂಭಾಗದಲ್ಲಿ ದೊಡ್ಡ ಫ್ಲೆಕ್ಸ್ ತೂಗಿಬಿದ್ದಿದೆ. 'ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿಸಿದ ಎಲ್ಲ ದೇಶವಾಸಿಗಳಿಗೂ ಅಭಿನಂದನೆಗಳು'! ಆಮ್ ಆದ್ಮಿ ಪಕ್ಷ ಈಗ 9ನೇ ರಾಷ್ಟ್ರೀಯ ಪಕ್ಷ ಚುನಾವಣಾ ಆಯೋಗದ ಪ್ರಕಾರ, ದೇಶದಲ್ಲಿ 3 ವಿಧದ ಪಕ್ಷಗಳಿವೆ. ರಾಷ್ಟ್ರೀಯ, ರಾಜ್ಯ ಮತ್ತು ಪ್ರಾದೇಶಿಕ ಪಕ್ಷಗಳು. ಒಟ್ಟು 2858 ರಾಜಕೀಯ ಪಕ್ಷಗಳು ನೋಂದಾಯಿಸಲ್ಪಟ್ಟಿವೆ. ಈ ಪೈಕಿ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿರುವುದು ಕೇವಲ 8 ಪಕ್ಷಗಳು: ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ...
ದೆಹಲಿ ಆಮ್ ಆದ್ಮಿ ಪಕ್ಷ ಸರ್ಕಾರದ ಮಾಹಿತಿ.