ಕೊರೊನಾ ರುದ್ರ ಕುಣಿತಕ್ಕೆ, ಮಿಂಚಿನ ಓಟಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಯಲ್ಲಿ ಬ್ರೇಕ್ ಹಾಕಲು ಮುಂದಾಗಿರುವ ಕೇಜ್ರಿವಾಲ್ ಸರ್ಕಾರ ಆಪರೇಷನ್ ಶೀಲ್ಡ್ ಔಟ್ ಆರಂಭಿಸಿದ್ದು, ಆರು ಸೂತ್ರಗಳನ್ನು ಜಾರಿ ತರಲು ಮುಂದಾಗಿದೆ. ಅಲ್ಲೊಂದು, ಇಲ್ಲೊಂದು ಪ್ರಕರಣ ಎಂದುಕೊಂಡು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಡಿತದಲ್ಲಿದ್ದೆ. ಈವರೆಗೂ 720 ಪ್ರಕರಣಗಳು ಪತ್ತೆಯಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 450ಕ್ಕೂ ಹೆಚ್ಚು ಕೇಸ್‍ಗಳು ಮರ್ಕಜ್ ಮೂಲದ್ದು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಕೊರೋನಾ ಸೋಂಕಿನ ಸಂಖ್ಯೆ ಕೈ ಮೀರಿ ಆಕಾಶದೆತ್ತರಕ್ಕೆ ಬೆಳೆಯದ್ದಂತೆ ದೆಹಲಿ ಸರ್ಕಾರ, ರಾಷ್ಟ್ರ ರಾಜಧಾನಿಯಲ್ಲಿ 100 ಪರ್ಸೆಂಟ್ ಸೀಲ್ಡ್ ಮಾದರಿಯನ್ನು ಜಾರಿಗೆ ತಂದಿದೆ. ದೆಹಲಿಯಲ್ಲಿ 25 ಪ್ರದೇಶಗಳನ್ನು ಹಾಟ್‍ಸ್ಪಾಟ್ ಗಳನ್ನು ಗುರುತಿಸಿದ್ದು. ಈ ಪ್ರದೇಶದಲ್ಲಿ ಆಪರೇಷನ್ ಶೀಲ್ಡ್ ಘೋಷಣೆ ಮಾಡಿದ್ದಾರೆ. ಕೊರೊನಾ ವಿರುದ್ಧ ಆಪರೇಷನ್ ಶೀಲ್ಡ್ ಘೋಷಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರು ಸೂತ್ರಗಳನ್ನು ಜಾರಿಗೆ ತರಲು ಸಿದ್ಧವಾಗಿದ್ದಾರೆ. 1 . ಮೊದಲ ಸೂತ್ರದ ಮೂಲಕ ಇಡೀ ಪ್ರದೇಶವನ್ನು ಸೀಲ್ ಮಾಡುವುದು ಮತ್ತು ಸೋಂಕಿತ ಪ್ರದೇಶವನ್ನು ಮ್ಯಾಪಿಂಗ್ ಮಾಡುವುದು. 2. ಸೀಲ್ ಮಾಡಿರುವ ಪ್ರದೇಶದಲ್ಲಿರುವ ಎಲ್ಲ ಜನರು ಮನೆಯಲ್ಲೇ ಇರುವುದು ಕಡ್ಡಾಯ 3. ...
ದೆಹಲಿ ಆಮ್ ಆದ್ಮಿ ಪಕ್ಷ ಸರ್ಕಾರದ ಮಾಹಿತಿ.