ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೆಹಲಿಯಲ್ಲಿ 11,000 ಕಡೆ ಉಚಿತ ವೈಫೈ ಸೌಲಭ್ಯ

ವೈಫೈ ಹಾಟ್‌ಸ್ಪಾಟ್‌ಗಳ ಮೂಲಕ ನಿತ್ಯವೂ 1.5 ಜಿಬಿವರೆಗೂ ಡೇಟಾದ ಉಚಿತ ಅಂತರ್ಜಾಲ ಸೌಲಭ್ಯ ಒದಗಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಪ್ರಕಟಿಸಿದರು.  ಈ ಸವಲತ್ತಿನ ಮೂಲಕ ನಮ್ಮ ಪ್ರಣಾಳಿಕೆಯ ಕೊನೆಯ ಭರವಸೆಯನ್ನು ಪೂರ್ಣಗೊಳಿಸುತ್ತಿದ್ದೇವೆ. ಈ ಯೋಜನೆಯು ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದರು.  ರಾಷ್ಟ್ರದ ರಾಜಧಾನಿಯಾದ್ಯಂತ ಸುಮಾರು 11,000 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲು ಸರ್ಕಾರ ಉದ್ದೇಶಿಸಿದೆ. ಡಿ.16ರ ವೇಳೆಗೆ 100 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲಾಗುವುದು. ನಂತರ ಪ್ರತಿ ವಾರ 500 ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲಾಗುವುದು. ಎಲ್ಲ ಹಾಟ್‌ಸ್ಪಾಟ್‌ಗಳನ್ನೂ ಆರು ವಾರದ ಒಳಗೆ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.  ಈ ಉದ್ದೇಶಕ್ಕಾಗಿ ಆಪ್ ಒಂದನ್ನು ಸಿದ್ಧಪಡಿಸಲಾಗುತ್ತಿದೆ. ಪ್ರೆಸ್ಟೋ ಎಂಬ ಕಂಪೆನಿ ಈ ಯೋಜನೆಯನ್ನು ನಿರ್ವಹಿಸುತ್ತಿದೆ. ದೆಹಲಿಯಾದ್ಯಂತ ಉಚಿತ ಇಂಟರ್ನೆಟ್ ಒದಗಿಸುವ ಈ ಯೋಜನೆಗೆ 100 ಕೋಟಿ ರೂ ವೆಚ್ಚ ತಗಲುತ್ತದೆ ಎಂದು ವಿವರಿಸಿದರು. ಇದರಿಂದ ದೆಹಲಿಯ ನಿವಾಸಿಗಳು ತಿಂಗಳಿಗೆ 15 ಜಿಬಿ ಡೇಟಾ ಪಡೆದುಕೊಳ್ಳಲಿದ್ದಾರೆ. 4,000 ಹಾಟ್‌ಸ್ಪಾಟ್‌ಗಳು ಬಸ್ ನಿಲ್ದಾಣಗಳಲ್ಲಿ ಲಭ್ಯವಾಗಲಿವೆ. ಇನ್ನು 7,000 ಮಾರುಕಟ್ಟೆ, ನಿವಾಸಿ ಅಭಿವೃದ್ಧಿ ಸಂಸ್ಥೆಗಳು ಮತ್ತು ನಗರದ ಇತರೆ ಸ್ಥಳಗಳಲ್ಲಿ ಸಿಗಲಿವೆ ಎಂದರು.  ಕನಿಷ...

ದೆಹಲಿಯಲ್ಲಿ 26.60 ಲಕ್ಷ ಆಮ್ ಆದ್ಮಿಗಳಿಗೆ ಬಂತು ಶೂನ್ಯ ವಿದ್ಯುತ್ ಶುಲ್ಕ: ಇದಕ್ಕೆ ಕಾರಣ ಇಲ್ಲಿದೆ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಹು ನಿರೀಕ್ಷಿತ ಯೋಜನೆ ‘ಮುಖ್ಯಮಂತ್ರಿ ಕಿರಯೇದಾರ್ ಬಿಜಲಿ ಮೀಟರ್ ಯೋಜನಾ’ ಅಡಿಯಲ್ಲಿ ರಾಷ್ಟ್ರ ರಾಜಧಾನಿಯ ಸುಮಾರು 26.60 ಲಕ್ಷ ಕುಟುಂಬಗಳಿಗೆ ನವೆಂಬರ್ ತಿಂಗಳಲ್ಲಿ ಶೂನ್ಯ ವಿದ್ಯುತ್ ಶುಲ್ಕ ಬಂದಿದೆ. ಈ ಯೋಜನೆ ಅಡಿಯಲ್ಲಿ 201 ಯುನಿಟ್ ಗಳಿಂದ 400 ಯುನಿಟ್ ಗಳವರೆಗಿನ ವಿದ್ಯುತ್ ಬಳಕೆಯ ಶುಲ್ಕದ ಮೇಲೆ ಸರಕಾರವು 50 ಪ್ರತಿಶತ ಸಬ್ಸಿಡಿಯನ್ನು ಒದಗಿಸುತ್ತದೆ. ಮತ್ತು 200 ಯುನಿಟ್ ಗಳವರೆಗಿನ ವಿದ್ಯುತ್ ಬಳಕೆ ಉಚಿತವಾಗಿರುತ್ತದೆ. ಪ್ರಾರಂಭದಲ್ಲಿ ಈ ಯೋಜನೆಯ ಪ್ರಯೋಜನವನ್ನು ಸ್ವಂತ ಮನೆ ಹೊಂದಿರುವವರಿಗೆ ಮಾತ್ರವೇ ನೀಡಲಾಗಿತ್ತು ಆದರೆ ಆ ಬಳಿಕ ಇದನ್ನು ಬಾಡಿಗೆದಾರ ಕುಟುಂಬಗಳಿಗೂ ವಿಸ್ತರಿಸಲಾಗಿತ್ತು. ಸೆಪ್ಟಂಬರ್2019 :  ನಗರದಲ್ಲಿರುವ ಒಟ್ಟು 52.27 ಲಕ್ಷ ಗೃಹೋಪಯೋಗಿ ವಿದ್ಯುತ್ ಗ್ರಾಹಕರಲ್ಲಿ ಸುಮಾರು 28 ಪ್ರತಿಶತ ಅಂದರೆ ಸುಮಾರು 14.64 ಲಕ್ಷ ಕುಟುಂಬಗಳಿಗೆ ಸೆಪ್ಟಂಬರ್ ತಿಂಗಳಲ್ಲಿ ಶೂನ್ಯ ವಿದ್ಯುತ್ ಶುಲ್ಕ ಬಂದಿದೆ ಎಂದು ಇಂಧನ ಇಲಾಖೆ ಬಿಡುಗಡೆಗೊಳಿಸಿರುವ ಮಾಹಿತಿ ತಿಳಿಸಲಾಗಿತ್ತು. ದೆಹಲಿಗೆ ಮೂರು ಪ್ರಮುಖ ವಿದ್ಯುತ್ ಪೂರೈಕೆ ಕಂಪೆನಿಗಳು ವಿದ್ಯುತ್ ಸೌಲಭ್ಯವನ್ನು ಒದಗಿಸುತ್ತಿವೆ ಮತ್ತು ದಕ್ಷಿಣ ಮತ್ತು ಪಶ್ಚಿಮ ದೆಹಲಿಯ ನಿವಾಸಿಗಳು ಈ ಯೋಜನೆಯ ಗರಿಷ್ಠ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯ ಕುರಿತಾಗಿ ಸೆಪ್ಟಂಬರ್ ನಲ್ಲಿ ಟ್ವೀಟ್ ಮೂಲಕ ಸಂತಸವ...