ದೆಹಲಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣದ ಕ್ಷೇತ್ರದಲ್ಲಿ ಒಂದು ಕ್ರಾಂತಿ ನಡೆಯುತ್ತಿದೆ. ಸರ್ಕಾರಿ ಶಾಲೆಯನ್ನು ಇಲ್ಲಿಯವರೆಗೆ ನಿರ್ಲಕ್ಷ್ಯ ಮತ್ತು ಕಡೆಗಣಿಸಲಾಗಿತ್ತು, ಈಗ ಸರ್ಕಾರಿ ಶಾಲೆಗಳ ಪುನರುಜ್ಜೀವನವನ್ನು ಮಾಡಲಾಗುತ್ತಿದೆ, ಅದಕ್ಕೆ ಸಾಕ್ಷಿಯಾಗಿ ಖಾಸಗಿ ಶಾಲೆಯಿಂದ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಆಡಳಿತ ಮತ್ತು ಮೂಲಸೌಕರ್ಯಗಳನ್ನು , ದೆಹಲಿ ಸರ್ಕಾರವು ತೆಗೆದ ನಿರ್ಧಾರಗಳ ಮೂಲಕ ಎಲ್ಲವನ್ನೂ ಶಕ್ತಿಯುತಗೊಳಿಸಲಾಗುತ್ತಿದೆ ಮತ್ತು ಪುನಶ್ಚೇತನಗೊಳಿಸಲಾಗುತ್ತಿದೆ. ದೆಹಲಿ ಸರ್ಕಾರದ ಮಾಜಿ ಶಿಕ್ಷಣ ಸಲಹೆಗಾರ್ತಿ ಅತೀಶಿಯವರು ಹೇಳಿದ್ದಂತೆ, "ವಿಶ್ವದ ಇತಿಹಾಸದಲ್ಲಿ ಯಾವುದೇ ದೇಶವು ತನ್ನ ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡದೆ ಅಭಿವೃದ್ಧಿಗೊಂಡಿಲ್ಲ." ಎಲ್ಲಾ ಪಾಲುದಾರರು ಸರಿಯಾದ ಕೆಲಸ ಮಾಡಲಿದ್ದಾರೆ ಎಂಬ ಆಳವಾದ ನಂಬಿಕೆಯೇ ಈ ಸುಧಾರಣೆಯ ಒಂದು ರಹಸ್ಯ. ಉದಾಹರಣೆಗೆ, ಕಳೆದ ನಾಲ್ಕು ವರ್ಷಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಒಳಪಡುವ ಶಾಲಾ ನಿರ್ವಹಣಾ ಸಮಿತಿಗಳಿಗೆ (ಎಸ್.ಎಂ.ಸಿ.ಗಳು) ದೆಹಲಿ ಸರ್ಕಾರವು ಶಾಲೆಗಳ ಆಡಳಿತವನ್ನು ವಿಕೇಂದ್ರೀಕರಿಸಿದೆ. ಇದು ಸಾರ್ವಜನಿಕ ಶಾಲೆಗಳ...
ದೆಹಲಿ ಆಮ್ ಆದ್ಮಿ ಪಕ್ಷ ಸರ್ಕಾರದ ಮಾಹಿತಿ.