ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

5T Plan ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕೊರೋನಾವನ್ನು ಹೇಗೆ ಎದುರಿಸುತ್ತೆ ದೆಹಲಿ? ಅರವಿಂದ್ ಕೇಜ್ರೀವಾಲ್ ಅವರ ಫುಲ್ ಪ್ಲಾನ್ ರೆಡಿ

ರಾಜಧಾನಿ ದೆಹಲಿಯಲ್ಲಿ ಕೊರೋನಾ ನಿಯಂತ್ರಣಕ್ಕೇನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುವುದನ್ನು ಸಿಎಂ ಅರವಿಂದ್ ಕೇಜ್ರೀವಾಲ್ ಬಹಿರಂಗಪಡಿಸಿದ್ದಾರೆ.  ದೆಹಲಿ ಸರ್ಕಾರ 5T ಹೆಸರಿನ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಇದರಲ್ಲಿ ಟೆಸ್ಟಿಂಗ್, ಟ್ರೇನಿಂಗ್, ಟ್ರೇಸಿಂಗ್, ಟ್ರೀಟ್ಮೆಂಟ್, ಟೀಂ ವರ್ಕ್ ಹಾಗೂ ಟ್ರ್ಯಾಕಿಂಗ್ ಆಂಡ್ ಮಾನಿಟರಿಂಗ್ ಕೂಡಾ ಶಾಮೀಲಾಗಿದೆ. ಅಲ್ಲದೇ ದೆಹಲಿಯಲ್ಲಿ ಮುನ್ನೂರು ಸೋಂಕಿತರಿದ್ದರೂ ಚಿಕಿತ್ಸೆ ನೀಡಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ ಎಂದು ಕೇಜ್ರೀವಾಲ್ ತಿಳಿಸಿದ್ದಾರೆ. ಸದ್ಯ ಇಲ್ಲಿ ಐನೂರು ಸೋಂಕಿತರಿದ್ದು, ವೈದ್ಯರು ಹಾಗೂ ದಾದಿಯರೇ ಈ ಸಮರದ ಬಹುಮುಖ್ಯ ಯೋಧರೆಂದು ತಿಳಿಸಿದ್ದಾರೆ.  ವಿಡಿಯೋ ಸಂದೇಶದಲ್ಲಿ ಈ ಮಾಹಿತಿ ನೀಡಿರುವ ಅರವಿಂದ್ ಕೇಜ್ರೀವಾಲ್ ನಾವು ಕೊರೋನಾಗಿಂತ ಮೂರು ಹೆಜ್ಜೆ ಮುಂದಿರಬೇಕು. ನಿದ್ದೆ ಮಾಡುತ್ತಾ ಉಳಿದರೆ ಇದನ್ನು ನಿಯಂತ್ರಿಸೋದು ಅಸಾಧ್ಯ ಎಂದಿದ್ದಾರೆ.  ಟೆಸ್ಟಿಂಗ್ : ಟೆಸ್ಟಿಂಗ್ ನಡೆಯದೆ ಕೊರೋನಾ ಸೋಂಕು ಇದೆಯೋ ಇಲ್ಲವೋ ಎಂದು ತಿಳಿಯುವುದಿಲ್ಲ. ಹೀಗಾಗಿ ಟೆಸ್ಟಿಂಗ್ ಅತೀ ಅಗತ್ಯ ಎಂದಿದ್ದಾರೆ.  ಟ್ರೇಸಿಂಗ್ : ಕೊರೋನಾ ಸೋಂಕಿತ ಹದದಿನಾಲ್ಕು ದಿನಗಳಲ್ಲಿ ಯಾರು ಯಾರನ್ನು ಬೇಟಿಯಾದ. ಅವರೆಲ್ಲರನ್ನೂ ಟ್ರೇಸ್ ಮಾಡಲಾಗುತ್ತದೆ. ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಇದಕ್ಕೆ ಪೊಲೀಸರೂ ಸಹಾಯ ಮಾಡುತ್ತಿದ್ದಾರೆ ಎಂದು ಕೇಜ್ರೀವಾಲ್ ತಿಳಿಸಿದ್ದಾರೆ....