ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೆಹಲಿಯಲ್ಲಿ ಅಕ್ಟೋಬರ್ 29ರಿಂದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

ದೆಹಲಿಯ ಸರ್ಕಾರಿ ಬಸ್‌ಗಳಲ್ಲಿ ಅಕ್ಟೋಬರ್ 29ರಿಂದ ಮಹಿಳೆಯರಿಗೆ ಉಚಿತ ಪ್ರಯಾಣಾವಕಾಶ ಕಲ್ಪಿಸಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಅಕ್ಟೋಬರ್ 29ರಿಂದ ದೆಹಲಿಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದರು.  ಕಳೆದ ಕೆಲವು ದಿನಗಳ ಹಿಂದಷ್ಟೇ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವುದಾಗಿ ಘೋಷಿಸಿದ್ದರು. ಅದಾದ ಬಳಿಕ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ನಂತರ ಪ್ರತಿ ಯುನಿಟ್‌ಗೆ ಅರ್ಧ ದರ ಎಂದು ಘೋಷಿಸಿದ್ದರು.  ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಯೋಜನೆಯಡಿಯಲ್ಲಿ ದೆಹಲಿ ಸರ್ಕಾರವು 700 ಕೋಟಿ ರೂಗಳನ್ನು ವೆಚ್ಚ ಮಾಡುತ್ತಿದೆ. ಸರ್ಕಾರವೇ ಟಿಕೆಟ್‌ಗಳನ್ನು ಖರೀದಿಸಲಿದೆ  ಎಂದರು .

ದೆಹಲಿಯಲ್ಲಿ ಉಚಿತ ನೀರು, ವಿದ್ಯುತ್ ಆಯ್ತು ಇದೀಗ ಉಚಿತ ವೈಫೈ ಸೌಲಭ್ಯ ಘೋಷಣೆ

ಇತ್ತೀಚೆಗಷ್ಟೇ 200 ಯೂನಿಟ್ ವರೆಗೆ ವಿದ್ಯುತ್ ಬಳಕೆ ಉಚಿತ ಎಂದು ಘೋಷಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಉಚಿತ ವೈಫೈ ಸೌಲಭ್ಯವನ್ನು ನೀಡುವ ಭರವಸೆಯನ್ನೂ ಕೂಡ ನೀಡಿದ್ದಾರೆ.  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರದಂದು ರಾಷ್ಟ್ರದ ರಾಜಧಾನಿಯಲ್ಲಿ ಉಚಿತ ವೈ-ಫೈ ಇಂಟರ್ನೆಟ್ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ. ಪ್ರತಿ ಬಳಕೆದಾರರಿಗೆ 15 ಜಿಬಿ ಡೇಟಾವನ್ನು ಉಚಿತವಾಗಿ ಪ್ರತಿ ತಿಂಗಳು 200 ಎಂಬಿಪಿಎಸ್ ವೇಗದಲ್ಲಿ ಇಂಟರ್ ನೆಟ್ ನೀಡಲಾಗುವುದು ಎಂದು ಹೇಳಿದರು.  ಕೆಲವು ತಿಂಗಳ ಹಿಂದೆ ಅಷ್ಟೇ ಮಹಿಳೆಯರಿಗೆ ಉಚಿತ ಮೆಟ್ರೋ ಸೇವೆ ಒದಗಿಸುವ ಪ್ರಸ್ತಾವವನ್ನು ಇಟ್ಟಿದ್ದರು.  ಮೊದಲ ಹಂತದ ಭಾಗವಾಗಿ ದೆಹಲಿಯಾದ್ಯಂತ 11,000 ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಲಾಗುವುದು.ಈಗಾಗಲೇ ಉಚಿತ ವೈ-ಫೈ ಒದಗಿಸುವ ಕೆಲಸ ಪ್ರಾರಂಭವಾಗಿದೆ .ಈ ಯೋಜನೆ ಇನ್ನು ಮೂರು ನಾಲ್ಕು ತಿಂಗಳ ಅವಧಿಯ ಒಳಗೆ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೊದಲ ಹಂತದ ಭಾಗವಾಗಿ ಒಟ್ಟು 11,000 ಹಾಟ್‌ಸ್ಪಾಟ್‌ಗಳಲ್ಲಿ 4,000 ಅನ್ನು ಬಸ್ ನಿಲ್ದಾಣಗಳಲ್ಲಿ ಸ್ಥಾಪಿಸಲಾಗುವುದು ಮತ್ತು ಉಳಿದ 7,000 ದೆಹಲಿಯಾದ್ಯಂತದ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ಇತ್ತೀಚೆಗಷ್ಟೇ ಉಚಿತ ವಿದ್ಯುತ್ ಸೌಲಭ್...

ದೆಹಲಿಯಲ್ಲಿ 200 ಯೂನಿಟ್ಸ್‌ವರೆಗಿನ ವಿದ್ಯುತ್ ಬಳಕೆ ಉಚಿತ: ನಂತರ ಅರ್ಧ ಬೆಲೆ ಮಾತ್ರ

ಇನ್ನುಮುಂದೆ 200 ಯೂನಿಟ್ಸ್ವರೆಗಿನ ವಿದ್ಯುತ್ ಬಳಕೆ ಉಚಿತ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಘೋಷಣೆ ಮಾಡಿದೆ.  ಸುಮಾರು 200 ಯೂನಿಟ್‌ ವರೆಗಿನ ವಿದ್ಯುತ್‌ ಅನ್ನು ಇಂದಿನಿಂದ ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ. 201ರಿಂದ 400 ಯೂನಿಟ್‌ಗಳವರೆಗಿನ ವಿದ್ಯುತ್‌ ಬಳಕೆಗೆ ಅರ್ಧ ಬೆಲೆಯನ್ನು ವಿಧಿಸುವುದಾಗಿ ತಿಳಿಸಿದ್ದಾರೆ.  ಅವರ ಪ್ರಕಾರ, ಬೇಸಿಗೆಯಲ್ಲಿ 200 ಯೂನಿಟ್ಸ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ದೆಹಲಿಯ ಸುಮಾರು ಶೇ. 33ರಷ್ಟು ಬಳಕೆದಾರರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಚಳಿಗಾಲದಲ್ಲಿ ಶೇ. 70ರಷ್ಟು ಜನರು 200 ಯೂನಿಟ್ಸ್‌ಗಿಂತಲೂ ಕಡಿಮೆ ವಿದ್ಯುತ್‌ ಅನ್ನು ಬಳಸುತ್ತಿದ್ದಾರೆ ಎನ್ನುತ್ತಾರೆ.  ಇನ್ನು ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಟ್ವೀಟ್‌ ಮಾಡಿ, ಉತ್ತಮ ಶಿಕ್ಷಣ ಮತ್ತು ಆರೋಗ್ಯದ ರಕ್ಷಣೆಯಂತೆಯೇ ಮನೆಯಲ್ಲಿ ದೀಪ ಅಥವಾ ಫ್ಯಾನ್‌ಗಳನ್ನು ಚಲಾಯಿಸಲು ಮೂಲಭೂತ ಪ್ರಮಾಣದ ವಿದ್ಯುತ್ ಅತ್ಯಗತ್ಯ ಎಂದು ಟ್ವೀಟ್‌ ಮಾಡಿ ಪೆಹಲೆ ಹಾಫ್‌ ಅಬ್‌ ಮಾಫ್‌ ಎಂಬ ಹ್ಯಾಷ್‌ಟ್ಯಾಗ್‌ ಹಾಕಿದ್ದಾರೆ.  ಇಂದು ದೇಶದಲ್ಲಿ ಅಗ್ಗದ ವಿದ್ಯುತ್‌ ದೆಹಲಿಯಲ್ಲಿದೆ. ಇದು ವಿದ್ಯುತ್‌ ಉಳಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ. ವಿಐಪಿಗಳು ಮತ್ತು ದೊಡ್ಡ ರಾಜಕಾರಣಿಗಳಿಗೆ ಉಚಿತವಾಗಿ ವ...